Site icon Suddi Belthangady

‘ನೀರು ಉಳಿಸಿ’ ಕಾರ್ಯಕ್ರಮದ ವಾರ್ಷಿಕ ವರದಿ ಬಿಡುಗಡೆ

ಉಜಿರೆ: ಯುನಿಸೆಫ್ ಹಮ್ಮಿಕೊಂಡಿರುವ “ನೀರು ಉಳಿಸಿ” ಅಭಿಯಾನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಪೂರ್ಣ ಸಹಕಾರ ನೀಡಲಾಗುವುದು ಎಂದು ಡಿ. ವೀರೇಂದ್ರ ಹೆಗ್ಗಡೆಯವರು ತಿಳಿಸಿದರು.

ಅವರು ಧರ್ಮಸ್ಥಳದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನೀರು ಉಳಿಸಿ ಕಾರ್ಯಕ್ರಮದ ವಾರ್ಷಿಕ ವರದಿಯನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಜಲಸಂರಕ್ಷಣೆ ಬಗ್ಯೆ ಯುನಿಸೆಫ್‌ನ ಕಾಳಜಿ ಹಾಗೂ ಪ್ರಯತ್ನ ಎಲ್ಲರಿಗೂ ಆದರ್ಶ ಹಾಗೂ ಅನುಕರಣೀಯವಾಗಿದೆ ಎಂದು ಹೇಳಿ ಅವರನ್ನು ಅಭಿನಂದಿಸಿದರು. ಹೇಮಾವತಿ ವೀ. ಹೆಗ್ಗಡೆಯವರು ಉಪಸ್ಥಿತರಿದ್ದರು.

ಹೈದರಾಬಾದ್‌ನ ಯುನಿಸೆಫ್‌ನ  ಹಿರಿಯ ಅಧಿಕಾರಿಗಳಾದ ವೆಂಕಟೇಶ್ ಅರಳಿಕಟ್ಟೆ ಮತ್ತು ಪ್ರಭಾತ್ ಮಟ್ಟಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್, ಮುಖ್ಯ ಹಣಕಾಸು ಅಧಿಕಾರಿ ಶಾಂತಾರಾಮ ಪೈ ಹಾಗೂ ನಿಖಿಲೇಶ್ ಉಪಸ್ಥಿತರಿದ್ದರು.

Exit mobile version