ಉಜಿರೆ: ಬೆಳ್ತಂಗಡಿ ತಾಲೂಕಿನ ಉಜಿರೆ ಜನಾರ್ಧನ ಸ್ವಾಮಿ ದೇವಸ್ಥಾನಕ್ಕೆ ಇನ್ನಷ್ಟು ಮೆರುಗು ಕೊಡುವ ರಾಜಗೋಪುರದ ಶಿಲಾನ್ಯಾಸ ಕಾರ್ಯಕ್ರಮ ಫೆ. 17ರಂದು ನಡೆಯಿತು. ಜನಾರ್ಧನ ಸ್ವಾಮಿ ದೇವಸ್ಥಾನದ ಕೀರ್ತಿ ಶೇಷ ವಿಜಯ ರಾಘವ ಪಡ್ವೆಟ್ನಾಯ ಸ್ಮರಣಾರ್ಥ ರಾಜಗೋಪುರಕ್ಕೆ ವಿಜಯ ಗೋಪುರ ಎಂಬ ಹೆಸರು ಇಡಲಾಗಿದೆ.
ಕಾಸರಗೋಡಿನ ಎಡನೀರು ಮಠದ ಶಂಕರಾಚಾರ್ಯ ಸಂಸ್ಥಾನದ ಸಚ್ಚಿದಾನಂದ ಭಾರತಿ ಸ್ವಾಮೀಜಿ ಗೋಪುರ ಶಿಲಾನ್ಯಾಸ ನೆರವೇರಿಸಿ, “ದೇವಾಲಯ ನಮ್ಮ ಊರಿನ ಸೌಂದರ್ಯ ಹೆಚಿಸುತ್ತದೆ, ಅದೇ ರೀತಿ ವಿಜಯ ಗೋಪುರ ಮೂಲಕ ದೇವಾಲಯದ ಅಂದ ಹೆಚ್ಚುತ್ತದೆ.
ರಾಜ ಗೋಪುರ ಬಹಳ ಮಹತ್ವದ ನಿರ್ಮಾಣದ ಅಂಗ. ದಾರಿಯಲ್ಲಿ ಹೋಗುವ ಭಕ್ತರು ವಿಜಯ ಗೋಪುರ ವನ್ನು ನೋಡಿ ಕೈಮುಗಿದರೂ ದೇವಸ್ಥಾನಕ್ಕೆ ಬಂದು ಕೈ ಮುಗಿದಂತೆ. ಉಜಿರೆ ಪೇಟೆಗೆ ಕಲಶ ಪ್ರಾಯವಾಗಿ ವಿಜಯ ಗೋಪುರ ನಿರ್ಮಾಣ ಆಗುತ್ತಿರುವುದು ಸಂತಸದ ವಿಷಯ” ಎಂದು ಆಶೀರ್ವಚನ ನೀಡಿದರು. ಸಭಾಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿದ ರಾಜ ಗೋಪುರ ನಿರ್ಮಾಣ ಸಮಿತಿ ಅಧ್ಯಕ್ಷ ಶಶಿಧರ್ ಶೆಟ್ಟಿ ಬರೋಡ ಮಾತನಾಡಿ, ” ನಾವು ಇವತ್ತು ಈ ಕಾಲಘಟ್ಟದಲ್ಲಿ ಇದ್ದೇವೆ ಅಂದರೆ ಖುಷಿ ಪಡುವ ವಿಷಯ.
ಬೆಳ್ತಂಗಡಿ ತಾಲೂಕಿನಲ್ಲಿ ಹರ ಹಾಗೂ ಹರಿ ಇರುವ ಏಕೈಕ ಸೇವಸ್ಥಾನ ಜನಾರ್ಧನ ಸ್ವಾಮಿ ದೇವಸ್ಥಾನ. ಈ ದೇವಸ್ಥಾನದ ಅಡಿ ಶಿಲೆಯಲ್ಲಿ ನಾಗನ ರೂಪ ಇದೆ. ವಿಜಯ ರಾಘವ ಪಾಡುವೆಟ್ನಯ ಅವರು ನನಗೆ ಈ ದೇವಸ್ಥಾನದಲ್ಲಿ ಅದನ್ನು ತೋರಿಸಿ ಕೊಟ್ಟಿದ್ದಾರೆ. ಧರ್ಮಸ್ಥಳದಲ್ಲಿ ಯಾವುದೇ ಧಾರ್ಮಿಕ ಕಾರ್ಯಕ್ರಮ ಆದರೂ ಮೆರವಣಿಗೆ ಜನಾರ್ಧನ ಸ್ವಾಮಿ ದೇವಸ್ಥಾನದಿಂದಲೇ ಆಗುತ್ತದೆ. ಇಲ್ಲಿಗೂ ಅಲ್ಲಿಗೂ ವಿಶೇಷ ನಂಟು ಇದೆ. ಹರ್ಷೋದ್ರ ಹೆಗ್ಡೆ ಯವರು ಹೇಳಿದ ಹಾಗೆ ವಿದ್ಯಾಕ್ಷೇತ್ರದಲ್ಲಿ ಕ್ರಾಂತಿ ಆಗಿರುವುದು ಉಜಿರೆಯಲ್ಲಿ. ಅಂತಹ ಊರು ಉಜಿರೆ, ಗೋಪುರ ನಿರ್ಮಾಣದ ಕಮಿಟಿ ಕೇವಲ ಹೆಸರು ನಿಮಿತ್ತ ಎಲ್ಲಾ ಕಾರ್ಯವನ್ನು ಜನಾರ್ಧನ ಸ್ವಾಮಿ ಮಾಡಿಸುತ್ತಾನೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ವೇದಿಕೆ ಹಂಚಿಕೊಂಡ ಧರ್ಮಸ್ಥಳ ಕ್ಷೇತ್ರದ ಡಿ. ಹರ್ಷೇಂದ್ರ ಕುಮಾರ್ ರಾಜಗೋಪುರದ ಮನವಿ ಪತ್ರ ಬಿಡುಗಡೆ ಮಾಡಿ, “60ನೇ ಇಸವಿಯಿಂದ ಉಜಿರೆಯನ್ನು ನೋಡಿಕೊಂಡು ಬೆಳೆದವರು. ಈಗ ಉಜಿರೆ ದೊಡ್ಡ ಪೇಟೆಯಾಗಿ ಬೆಳೆದಿದೆ. ಧರ್ಮಸ್ಥಳದ ವಿದ್ಯಾ ಸಂಸ್ಥೆ ಬಂತು, ಆಸ್ಪತ್ರೆ ಬಂತು. ಯಾವಾಗ ಒಂದು ಊರಿನಲ್ಲಿ ವಿದ್ಯಾಸಂಸ್ಥೆ ಬರುತ್ತದೆಯೋ ಅವಾಗ ಅಭಿವೃದ್ದಿ ದ್ವಿಗುಣ ಗೊಳ್ಳುತ್ತದೆ. ಈಗ ಜನಾರ್ಧನ ಸ್ವಾಮಿ ದೇವಸ್ಥಾನಕ್ಕೆ ವಿಜಯ ಗೋಪುರ ನಿರ್ಮಾಣ ಆಗ್ತಿದೆ. ಇದು ಬಹಳ ಖುಷಿಯ ವಿಚಾರ, ಯಾವುದೇ ಕಾರಣಕ್ಕೂ ಕಾಮಗಾರಿ ನಿಧಾನ ಮಾಡಬೇಡಿ ಎಂದು ಸೂಚನೆ ನೀಡಿದರು.
ಸಭಾ ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತರಿದ್ದ ಶಾಸಕ ಹರೀಶ್ ಪೂಂಜ, ದಾನಿಗಳ ಕೂಪನ್ ಬಿಡುಗಡೆ ಮಾಡಿ,” ಉಜಿರೆ ಕರ್ನಾಟಕದಲ್ಲಿ ಬಹಳ ವಿಶೇಷವಾದ ಊರು. ವಿದ್ಯಾಕ್ಷೇತ್ರ, ಧಾರ್ಮಿಕ ಕ್ಷೇತ್ರದಲ್ಲಿ ರಾಜ್ಯದಲ್ಲಿ ಮುಂಚೂಣಿಯಲ್ಲಿರುವ ನಗರ ಉಜಿರೆ. ಇನ್ನು ದೇವಸ್ಥಾನಕ್ಕೆ ರಾಜಗೋಪುರ ನಿರ್ಮಾಣ ಅದು ಪರಿಪೂರ್ಣ ಆದಂತೆ. ಇವತ್ತು ಶತ ಶತಮಾನಕ್ಕೂ ನೆನಪಲ್ಲಿ ಉಳಿಯುವಂತದ ದಿನ. ಕುಂಭಮೇಳ ನಡೆಯುತ್ತಿರುವ ಕಾಲದಲ್ಲಿ ಜನಾರ್ಧನ ಸ್ವಾಮಿ ದೇವಸ್ಥಾನ ವಿಜಯಗೋಪುರ ನಿರ್ಮಾಣ ಆಗುತ್ತಿರುವುದು ಇತಿಹಾಸದ ಪುಟದಲ್ಲಿ ಅಚ್ಚಳಿಯದ ಉಳಿಯುವ ಗಳಿಗೆ, ಇದಕ್ಕಾಗಿ ಶಾಸಕರ ನಿಧಿಯಿಂದ 10 ಲಕ್ಷ ದೇಣಿಗೆ ಕೊಡುತ್ತೇನೆ ಎಂದು ಆಶ್ವಾಸನೆ ಕೊಟ್ಟರು.
ಅಮೇರಿಕಾದಲ್ಲಿ ನೆಲೆಸಿರುವ ಉಜಿರೆಯ ಕಿರಣ್ ರಾವ್ ದೇವಸ್ಥಾನಕ್ಕೆ ಬ್ರಹ್ಮ ರಥವನ್ನು ಕೊಡಲಿದ್ದು, ಬ್ರಹ್ಮ ರಥ ನಿರ್ಮಾಣದ ಘೋಷಣೆಯನ್ನು ಸಭೆಯಲ್ಲಿ ಮಾಡಲಾಯಿತು. ವೇದಿಕೆಯಲ್ಲಿ ಜನಾರ್ಧನ ಸ್ವಾಮಿ ದೇವಸ್ಥಾನ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಅತಿಥಿ ಗಣ್ಯರನ್ನು ಸ್ವಾಗತಿಸಿದರು.
ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಶ್ರೀಧರ ಪನ್ವೆಟ್ನಾಯ, ಶಿವರಾಮ ಪಡ್ಡೆಟ್ನಾಯ, ಅನಂತ ಮೋಹನ್ ರಾವ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮುಖ್ಯಸ್ಥರಾದ ಅನಿಲ್ ಕುಮಾರ್ ಎಸ್. ಎಸ್. ರಾಜಗೋಪುರ ಸಮಿತಿ ಸಂಚಾಲಕ ಮೋಹನ್ ಕುಮಾರ್, ಕೋಶಾಧಿಕಾರಿ ರಾಜೇಶ್ ಪೈ, ಕಾರ್ಯದರ್ಶಿ ಲಕ್ಷ್ಮಣ ಸಫಲ್ಯ, ಪ್ರಮುಖರಾದ ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪೂರನ್ ವರ್ಮ, ಉಜಿರೆ ಎಸ್.ಡಿ.ಎಂ ಆಸ್ಪತ್ರೆಯ ಎಂ.ಡಿ ಜನಾರ್ಧನ್, ಗೋವಿಂದ ದಾಮ್ಲ, ರಾಜೇಶ್ ಶೆಟ್ಟಿ ನವಶಕ್ತಿ, ಮಾಧವ ಹೊಳ್ಳ ಕಾಮಧೇನು, ವಿದ್ಯಾ ಶ್ರೀನಿವಾಸ್ ಬೆಳಾಲು, ಎಂ.ಎಂ ದಯಾಕರ್ ಉಜಿರೆ, ಅರುಣ್ ಕುಮಾರ್ ದಿಶಾ, ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಕುಮಾರ ಹೆಗ್ಡೆ, ಸೋಮಶೇಖರ್ ಶೆಟ್ಟಿ, ರಬ್ಬರ್ ಸೊಸೈಟಿ ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಜು ಶೆಟ್ಟಿ ಬೆಂಗತ್ಯಾರು, ಉದ್ಯಮಿಗಳಾದ ಪ್ರಭಾಕರ ಹೆಗ್ಡೆ ಮಹಾವೀರ, ಪ್ರಶಾಂತ್ ಜೈನ್ ಅಮೃತ ಟೆಕ್ಟ್ ಟೈಲ್ಸ್, ಶ್ರೀಧರ್ ಸುರಕ್ಷಾ ಮೆಡಿಕಲ್, ರಾಜೇಶ್ ತ್ರಿಶೂಲ್, ಅರವಿಂದ ಕಾರಂತ್, ಉಮೇಶ್ ಶೆಟ್ಟಿ ದುರ್ಗಾ, ತುಕರಾಮ್ ಸಾಲಿಯಾನ್ ಕನ್ಯಾಡಿ, ಅಕ್ಷಯ್ ದಿಶಾ, ಉದ್ಯಮಿ ರವಿ ಚಕ್ಕಿತ್ತಾಯ, ಬೆಳ್ತಂಗಡಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ಕಿರಣ್ ಕುಮಾರ್ ಶೆಟ್ಟಿ, ಮಹಿಳಾ ಗ್ರಾಹಕರ ವಿವಿಧೋದ್ದೇಶ ಸಹಕಾರ ಸಂಘದ ಮಾಜಿ ಅಧ್ಯಕ್ಷೆ ಪುಷ್ಪಾವತಿ ಆರ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿ ಉಜಿರೆ, ಪ್ರಭಾಕರ ಶೆಟ್ಟಿ ಉಪ್ಪಡ್ಕ, ಅಜಯ್ ಶೆಟ್ಟಿ ಉಜಿರೆ, ರಘುರಾಮ ಶೆಟ್ಟಿ ಉಜಿರೆ ಹಾಗೂ ಊರವರು ಉಪಸ್ಥಿತರಿದ್ದರು.
ಶಿವಪ್ರಸಾದ್ ಬಾರಯಾರಿತ್ತಾಯ ಮತ್ತು ವೃಂದ ವೇದಘೋಷ ಮಾಡಿದರು. ಸುನೀಲ್ ಸಂಘಪಂಡಿತ್ ಮತ್ತು ರವೀಂದ್ರ ಶೆಟ್ಟಿ ಬಳಂಜ ಕಾರ್ಯಕ್ರಮ ನಿರೂಪಿಸಿದರು. ಸಂಜೀವ ಶೆಟ್ಟಿ ಕುಂಟಿನಿ ಧನ್ಯವಾದವಿತ್ತರು.