Site icon Suddi Belthangady

ಕೋಟಕ್ ಲೈಫ್ ಗೆ 2ನೇ ವರ್ಷದ ಸಂಭ್ರಮ

ಬೆಳ್ತಂಗಡಿ: ವೈಭವ್ ಆರ್ಕೆಟ್ ನಲ್ಲಿ ಕೋಟಕ್ ಲೈಫ್ ಆಫೀಸ್ ಉದ್ಘಾಟನೆಗೊಂಡು 1 ವರ್ಷ ಪೂರೈಸಿ, 2ನೇ ವರ್ಷಕ್ಕೆ ಕಾಲಿಡುತಿರುವ ಸಂದರ್ಭದಲ್ಲಿ ಸಂಭ್ರಮಾಚರಣೆಯನ್ನು ಕೋಟಕ್ ಲೈಫ್ ಏರ್ಯ ಹೆಡ್ ಆಗಿರುವ ಮಾನ್ಯ ಮೈಕಲ್ ಡಿಸೋಜ ದೀಪ ಪ್ರಜ್ವಲನೆ ಮಾಡುವ ಮೂಲಕ ಚಾಲನೆ ನೀಡಿ ಬೆಳ್ತಂಗಡಿ ಬ್ರಾಂಚ್ ಜನತೆಗೆ 1 ವರ್ಷದಲ್ಲಿ 55 ಕೋಟಿ ರೂಪಾಯಿಗಳ ಆರ್ಥಿಕ ಭದ್ರತೆ ನೀಡಿದೆ.

ಇದು ಬ್ರಾಂಚ್ ವ್ಯಾಪ್ತಿಯ ಸಾಧನೆಯಲ್ಲಿ ದೇಶದಲ್ಲಿ 4 ನೇ ಸ್ಥಾನ, ರಾಜ್ಯದಲ್ಲಿ 2 ನೇ ಸ್ಥಾನ ಪಡೆದು 2ನೇ ವರ್ಷಕ್ಕೆ ಪಾದಾರ್ಪಣೆಗೊಂಡಿದೆ. ಮುಂದಿನ ವರ್ಷದಲ್ಲಿ ಬೆಳ್ತಂಗಡಿ ಕೋಟಕ್ ಲೈಫ್ ದೇಶದಲ್ಲೇ ಅತ್ಯುನ್ನತ ಸ್ಥಾನದಲ್ಲಿ ಗುರುತಿಸುವಂತಂಗಾಲಿ ಎಂದು ಶುಭಹಾರೈಸಿದರು.

ಬಳಿಕ ವಿವಿಧ ಕಾರ್ಯಕ್ರಮಗಳು ನಡೆಯಿತು. ಮುಖ್ಯ ಅತಿಥಿಗಳಾಗಿ ಕೋಟಕ್ ಲೈಫ್ ಮ್ಯಾಂಗಲೋರ್ ಚೀಫ್ ಎಜೇಂನ್ಸಿ ಪಾರ್ಟ್ ನರ್ ಪದ್ಮ ಬೆಳಚಡ ಹಾಗೂ ಸೀನಿಯರ್ ಎಜೇಂನ್ಸಿ ಪಾರ್ಟ್ ನರ್ ಚಂದ್ರಶೇಖರ್ ಮಾತನಾಡಿ ಮುಂದಿನ ದಿನಗಳಲ್ಲೂ ಜನತೆಗೆ ಆರ್ಥಿಕ ಭದ್ರತೆ ಒದಗಿಸುವಲ್ಲಿ ಬೆಳ್ತಂಗಡಿ ಬ್ರಾಂಚ್ ಮುಂಚೂಣಿಯಲ್ಲಿ ಗುರುತಿಸುವಂತಂಗಾಲಿ ಎಂದು ಶುಭ ಹಾರೈಸಿದರು.

ಬೆಳ್ತಂಗಡಿ, ಕಡಬ, ಪುತ್ತೂರು ಬ್ರಾಂಚ್ ಮ್ಯಾನೇಜರ್ ಗಳು, ಪ್ರಜ್ವಲ್ ಅಡೂರ್, ದುರ್ಗಾಪ್ರಸಾದ್, ರವಿ ಆಚಾರ್ಯ, ಚೀಫ್ ಎಜೇಂನ್ಸಿ ಪಾರ್ಟ್ ನರ್ ಗಳಾದ ದಿನಕರ್ ಕೆ., ಗಿರೀಶ್ ಬಿ. ಜಿ., ಸೀನಿಯರ್ ಎಜೇಂನ್ಸಿ ಪಾರ್ಟ್ ನರ್ ಗಳಾದ ಅನಿತಾ ಪ್ರದೀಪ್ ಶೆಟ್ಟಿ, ಯೋಗೀಶ್ ಆಳಂಬಿಲ ಕೊಕ್ಕಡ, ಬೆಳ್ತಂಗಡಿ, ಕಡಬ, ಪುತ್ತೂರು, ಮಡಿಕೇರಿ ಬ್ರಾಂಚ್ ಏಜೇಂನ್ಸಿ ಪಾರ್ಟ್ ನರಗಳು, ಅಡ್ವೈಸರ್ ಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು. ಎಜೇಂನ್ಸಿ ಪಾರ್ಟ್ ನರ್ ಗಂಗಾಧರ್ ಕಳೆಂಜ ಕಾರ್ಯಕ್ರಮ ನಿರೂಪಿಸಿದರು.

Exit mobile version