Site icon Suddi Belthangady

ಉಚಿತ ಸಾಮೂಹಿಕ ವಿವಾಹ: ನೋಂದಣಿ ಕಛೇರಿ ಉದ್ಘಾಟನೆ

ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 2025ರ ಮೇ. 3ರಂದು ಸಂಜೆ ಗಂಟೆ 6.48ಕ್ಕೆ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ 53ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ ನಡೆಯಲಿದ್ದು, ವಿವಾಹ ನೋಂದಣಿ ಕಛೇರಿಯನ್ನು ದೇವಸ್ಥಾನದ ಎದುರು ಇರುವ ಪ್ರವಚನ ಮಂಟಪದಲ್ಲಿ ಫೆ. 16ರಂದು ಎಸ್. ಡಿ. ಎಂ ಧರ್ಮೋತ್ಥಾನ ಟ್ರಸ್ಟ್ ನ ಕಾರ್ಯದರ್ಶಿ ಎ. ವಿ. ಶೆಟ್ಟಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು.

ದೇವಳ ಪಾರುಪತ್ಯಗಾರ್ ಲಕ್ಷಿ ನಾರಾಯಾಣ ರಾವ್, ಧರ್ಮಸ್ಥಳ ಗ್ರಾ. ಪಂ. ಉಪಾಧ್ಯಕ್ಷ ಶ್ರೀನಿವಾಸ ರಾವ್, ಅನ್ನಪೂರ್ಣ ಛತ್ರದ ಮ್ಯಾನೇಜರ್ ಸುಬ್ರಹ್ಮಣ್ಯಪ್ರಸಾದ್, ನಿವೃತ್ತ ಮುಖ್ಯೋಪಾಧ್ಯಾಯ ಧರ್ಣಪ್ಪ ಮಾಸ್ಟರ್, ಸಂತೋಷ್ ಗೌಡ, ಶಿವರಾಮ್, ಪವಿತ್ರ, ಭವಾನಿ, ಮಂಜುಳಾ ಉಪಸ್ಥಿತರಿದ್ದರು.

ಸಾಮೂಹಿಕ ವಿವಾಹದ ಎಲ್ಲಾ ವೆಚ್ಚವನ್ನು ಧರ್ಮೋತ್ಥಾನ ಟ್ರಸ್ಟ್ ವತಿಯಿಂದ ನಿರ್ವಹಿಸಲಿದ್ದು, ಈ ಸಮಾರಂಭದಲ್ಲಿ ಮದುವೆಯಾಗಲಿಚ್ಛಿಸುವವರು ಏ. 25ರೊಳಗೆ ಹೆಸರು ನೋಂದಾಯಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 0825626644, 9663464648, 8147263422.

Exit mobile version