ಬೆಳ್ತಂಗಡಿ: ಭಾರತಾದ್ಯಂತ ಮಂದಿರ ಮಹಾಸಂಘದ ಕಾರ್ಯಕ್ಕೆ ಹಿಂದೂಗಳ ಅತ್ಯುತ್ತಮ ಬೆಂಬಲದಿಂದ ಸಿಕ್ಕಿದ ಯಶಸ್ಸು ಕರ್ನಾಟಕ ರಾಜ್ಯದ ದೇವಸ್ಥಾನಗಳ ಅಭಿವೃದ್ಧಿಗಾಗಿ ಹಿಂದೂಗಳು ತಮ್ಮ ಕೈ ಜೋಡಿಸಬೇಕೆಂದು ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕ ಚಂದ್ರ ಮೊಗೇರ ಹೇಳಿದರು.
ದೇವಸ್ಥಾನಗಳ ಸಂಸ್ಕೃತಿ ರಕ್ಷಣೆಗಾಗಿ ಕರ್ನಾಟಕ ಮಂದಿರ ಮಹಾಸಂಘ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಆಯೋಜನೆಯಲ್ಲಿ ‘ ತಾಲೂಕು ಮಟ್ಟದ ಮಂದಿರ ಅಧಿವೇಶನ’ವು ಶ್ರೀ ಸುಬ್ರಹ್ಮಣ್ಯ ಸ್ಥಾಣಿಕ ಬ್ರಾಹ್ಮಣ ಸಭಾಭವನ, ಲಾಯಿಲದಲ್ಲಿ ಫೆ. 15ರಂದು ನಡೆಯಿತು.
ಮುಂಡಾಜೆ ಸನ್ಯಾಸಿ ಕಟ್ಟೆ ಶ್ರೀ ಪರಶುರಾಮ ದೇವಸ್ಥಾನದ ಸದಸ್ಯ ನಾರಾಯಣ ಫಡ್ಕೆ, ಬೆಳಾಲು ಅನಂತೋಡಿ ಅನಂತೆಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನೋಟರಿ ವಕೀಲ ಶ್ರೀನಿವಾಸ ಗೌಡ, ಸನಾತನ ಸಂಸ್ಥೆಯ ಧರ್ಮಪ್ರಚಾರಕ ಸಂತ ರಮಾನಂದ ಗೌಡ, ಹಿಂದೂ ಜನಜಾಗೃತಿ ಸಮಿತಿಯ ಚಂದ್ರ ಮೊಗವೀರ ಇವರು ದೀಪ ಪ್ರಜ್ವಲನೆಯನ್ನು ಮಾಡಿದರು.
ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಡಾ. ಪ್ರದೀಪ್ ನಾವೂರ , ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕ ಮತ್ತು ಪುರೋಹಿತರ ಪರಿಷತ್ ನ ಅಧ್ಯಕ್ಷ ರವಿಕುಮಾರ್ ಭಟ್ ಪಜೀರಡ್ಕ, ಬ್ರಹ್ಮಲಿಂಗೇಶ್ವರ ದೇವಸ್ಥಾನ ಧರ್ಮ ದರ್ಶಿ ಜಯ ಸಾಲಿಯಾನ್ ಉಪಸ್ಥಿತರಿದ್ದರು.