Site icon Suddi Belthangady

ಎಕ್ಸಲೆಂಟ್ ಪ್ರೌಢಶಾಲೆಯ ವಿದ್ಯಾರ್ಥಿಗಳು ಪಂಚಾಯತಿಗೆ ಭೇಟಿ

ಬೆಳ್ತಂಗಡಿ: ಎಕ್ಸಲೆಂಟ್ ಪ್ರೌಢ ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಗ್ರಾಮ ಪಂಚಾಯತಿಗೆ ಶಿಕ್ಷಣಾತ್ಮಕ ಬೇಟಿಯನ್ನು ನೀಡಿದರು. ಪಿ. ಡಿ. ಒ ಗಣೇಶ ವಿದ್ಯಾರ್ಥಿಗಳಿಗೆ ಗ್ರಾಮ ಪಂಚಾಯತಿನ ಕಾರ್ಯ, ಕರ್ತವ್ಯ ಮತ್ತು ಹೊಣೆಗಾರಿಕೆಯ ಕುರಿತು ವಿವರವಾಗಿ ತಿಳಿಸಿದರು.

ಗ್ರಾಮೀಣ ಅಭಿವೃದ್ಧಿಯ ಮೂಲಸೌಕರ್ಯ ಯೋಜನೆಗಳು ಮತ್ತು ಜನಪರ ಕಾರ್ಯಕ್ರಮಗಳು ಬಗ್ಗೆ ವಿದ್ಯಾರ್ಥಿಗಳು ಸಮಗ್ರ ಜ್ಞಾನ ಪಡೆದರು. ವಿದ್ಯಾರ್ಥಿಗಳು ಚರ್ಚೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತಮ್ಮ ಕುತೂಹಲಕ್ಕೆ ಉತ್ತರಗಳನ್ನು ಪಡೆದರು.

ವಿದ್ಯಾರ್ಥಿಗಳು ಗ್ರಾಮ ಪಂಚಾಯತಿ ಸಿಬ್ಬಂದಿಗಳಿಗೆ ತಮ್ಮ ಕೈಯಿಂದ ತಯಾರಿಸಿದ ಹೂಗುಚ್ಛ ನೀಡಿ ಗೌರವಿಸಿದ್ದರು. ಈ ಕಾರ್ಯಕ್ರಮದಲ್ಲಿ ಪಂಚಾಯತ್ ಕಾರ್ಯದರ್ಶಿ ಕಾಂತಪ್ಪ ವಿದ್ಯಾರ್ಥಿಗಳಿಗೆ ಚುನಾವಣೆ ಪದ್ಧತಿಯ ಮಾಹಿತಿ ನೀಡಿದರು. ಸ್ಕೌಟ್ ಮಾಸ್ಟರ್ ನವೀನ್ ಭಾಸ್ಕರ್ ನೆಲ್ಯಾಡಿ ಉಪಸ್ಥಿತರಿದ್ದರು. ಕೃಷಿ ಕ್ಷೇತ್ರದಲ್ಲಿ ಸರ್ಕಾರದ ಸೌಲಭ್ಯಗಳ ಮಾಹಿತಿ, ಈ ಶಿಕ್ಷಣಾತ್ಮಕ ಭೇಟಿ ವಿದ್ಯಾರ್ಥಿಗಳಲ್ಲಿ ನಾಗರಿಕ ಜಾಗೃತಿ ಮತ್ತು ಜವಾಬ್ದಾರಿತ್ವ ಭಾವನೆ ಬೆಳೆಸಲು ಮಹತ್ವದ ಪಾತ್ರ ವಹಿಸಿತು.

Exit mobile version