ಅರಸಿನಮಕ್ಕಿ: ಭಜನಾ ಮಂಡಳಿಗಳ ಬಲವರ್ಧನೆಗಾಗಿ ಫೆ. 15ರಂದು ಭಜನಾ ಪರಿಷತ್ ಸಭೆಯನ್ನು ತಾಲೂಕು ಭಜನಾ ಪರಿಷತ್ ಅಧ್ಯಕ್ಷ ವೆಂಕಟೇಶ್ ಭಟ್ ಉಪಸ್ಥಿತಿಯಲ್ಲಿ ಬಂಟರ ಭವನದಲ್ಲಿ ನಡೆಸಲಾಯಿತು.
ತಾಲೂಕು ಭಜನಾ ಪರಿಷತ್ ಸಂಯೋಜಕ ಕೃಷ್ಣಪ್ಪ ಗೌಡ, ವಲಯ ಜನಜಾಗ್ರತಿ ವಲಯ ಅಧ್ಯಕ್ಷ ಸತೀಶ್ ಶೆಟ್ಟಿ ಗುತ್ತು, ವಲಯದ ಭಜನಾ ಮಂಡಳಿಗಳ ಪದಾಧಿಕಾರಿಗಳು, ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು. ವಲಯದಲ್ಲಿರುವ ಭಜನಾ ಮಂಡಳಿಗಳನ್ನು ಇನ್ನಷ್ಟು ಸದೃಢಗೊಳಿಸಲು ವಲಯ ಮಟ್ಟದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ವಲಯದ ನೂತನ ಅಧ್ಯಕ್ಷರಾಗಿ ಕೃಷ್ಣಪ್ಪಗೌಡ, ಉಪಾಧ್ಯಕ್ಷರಾಗಿ ವಸಂತಗೌಡ ಶಿಬಾಜೆ, ಕಾರ್ಯದರ್ಶಿಯಾಗಿ ನೀತಾ, ಜೊತೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ಶಿಶಿಲ, ಕೋಶಾಧಿಕಾರಿಯಾಗಿ ಮಹೇಶ್ ಕುಮಾರ್ ಪೆರ್ಲ ರವರನ್ನು ಸಭೆಯಲ್ಲಿ ಆಯ್ಕೆ ಮಾಡಲಾಯಿತು.