Site icon Suddi Belthangady

ಮೆಟ್ರಿಕ್ ಮೇಳ

ಬೆಳ್ತಂಗಡಿ: ಸ. ಉ. ಪ್ರಾಥಮಿಕ ಶಾಲೆ ಕನ್ಯಾಡಿ-1, ಮೆಟ್ರಿಕ್ ಮೇಳ ಕಾರ್ಯಕ್ರಮವು ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಎಸ್‌.ಡಿ.ಎಂ.ಸಿ ಅಧ್ಯಕ್ಷ ನೋಣಯ್ಯ ಗೌಡ, ನಡೆಸಿ ಶುಭಹಾರೈಸಿದರು.
ಮಕ್ಕಳಲ್ಲಿ ಭವಿಷ್ಯದ ಹಿತ ದೃಷ್ಟಿಯಿಂದ ವ್ಯವಹಾರ ಜ್ಞಾನ, ವ್ಯಾಪಾರ ಕೌಶಲಗಳನ್ನು ಹೆಚ್ಚಿಸುವುದು ಈ ಮೆಟ್ರಿಕ್ ಮೇಳದ ಪ್ರಮುಖವಾದ ಉದ್ದೇಶವಾಗಿದೆ ಎಂದು ಈ ಕಾರ್ಯಕ್ರಮದ ಮಾರ್ಗದರ್ಶಿ ಶಿಕ್ಷಕ ವಿಕಾಸ್ ರಾವ್ ರವರು ತಿಳಿಸಿದರು.

ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಸುನಿಲ್ ಶೆಟ್ಟಿ, ಶಾಲಾ ಮುಖ್ಯೋಪಾಧ್ಯಾಯ ಹನುಮಂತರಾಯ, ಶಿಕ್ಷಕ ವೃಂದ, ಎಸ್. ಡಿ. ಎಂ. ಸಿ ಸದಸ್ಯರು, ಪೋಷಕರು, ಊರಿನ ಗ್ರಾಮಸ್ಥರು ಉಪಸ್ಥಿತರಿದ್ದು, ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.

Exit mobile version