Site icon Suddi Belthangady

ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಧಾರ್ಮಿಕ ಸಭೆ ಮತ್ತು ಒಕ್ಕೂಟಗಳ ಪದಗ್ರಹಣ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಮಲಮಂತಿಗೆ ಪ್ರಗತಿ ಬಂಧು, ಮಹಿಳಾ ಜ್ಞಾನವಿಕಾಸ ಮತ್ತು ಸ್ವಸಹಾಯ ಸಂಘಗಳ ಒಕ್ಕೂಟ ದಿಡುಪೆ/ಅಲಕ್ಕೆ ಹಾಗೂ ಸ್ಥಳೀಯ ಎಲ್ಲಾ ಸಂಘ ಸಂಸ್ಥೆಗಳ ಮತ್ತು ಊರವರ ಸಹಭಾಗಿತ್ವದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಧಾರ್ಮಿಕ ಸಭೆ ಮತ್ತು ಒಕ್ಕೂಟಗಳ ಪದಗ್ರಹಣ ಶ್ರೀ ವಿದ್ಯಾ ಗಣಪತಿ ಸೇವಾ ಸಮಿತಿ ಮಲವಂತಿಗೆ ಇದರ ಸಹಕಾರದೊಂದಿಗೆ ಫೆ. 14ರಂದು ಮಧ್ಯಾಹ್ನ 11ಗಂಟೆಗೆ ದಿಡುಪೆ ಶಾಲಾ ವಠಾರದಲ್ಲಿ ನಡೆಯಿತು.

ಸಭಾಧ್ಯಕ್ಷರಾಗಿ ರೋಹಿಣಿ ಜಯವರ್ಮ ಅಧ್ಯಕ್ಷರು ಸಾ.ಶ್ರೀ.ಸ ಪೂಜಾ ಸಮಿತಿ, ಮುಖ್ಯ ಅತಿಥಿಗಳಾಗಿ ಕೆ. ಮೋಹನ್ ಕುಮಾರ್ ಮಾಲಕರು ಲಕ್ಷ್ಮೀಗ್ರೂಫ್ಟ್, ಕನಸಿನ ಮನೆ, ಉಜಿರೆ, ಸುರೇಂದ್ರ ಯೋಜನಾಧಿಕಾರಿಗಳು ಶ್ರೀ ಕ್ಷೇ.ಧ.ಗ್ರಾ. ಯೋಜನೆ (ರಿ.) ಬೆಳ್ತಂಗಡಿ, ಸೀತರಾಮ್ ಅಧ್ಯಕ್ಷರು ಪ್ರಗತಿಬಂಧು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟ, ಎಸ್.ಕೆ.ಡಿ.ಆರ್.ಡಿ.ಪಿ. ಬೆಳ್ತಂಗಡಿ ಮುಂತಾದವರು ಉಪಸ್ಥಿತರಿದ್ದರು. ಧಾರ್ಮಿಕ ಉಪನ್ಯಾಸವನ್ನು ಕೆ. ಜಯರಾಮ್, ಕಲಾಕುಂಚ ಸೋಮಂತ್ತಡ್ಕ ನಡೆಸಿಕೊಟ್ಟರು.

Exit mobile version