Site icon Suddi Belthangady

ಮಚ್ಚಿನ ಗ್ರಾಮ ಪಂಚಾಯತ್ ದ್ವಿತೀಯ ಸುತ್ತಿನ ಗ್ರಾಮಸಭೆ

ಮಚ್ಚಿನ: ಗ್ರಾಮ ಪಂಚಾಯತ್ 2024-25 ನೇ ಸಾಲಿನ ದ್ವಿತೀಯ ಸುತ್ತಿನ ಗ್ರಾಮಸಭೆ ಫೆ. 13ರಂದು ಸಮುದಾಯ ಭವನ ಬಳ್ಳಮಂಜದಲ್ಲಿ ನಡೆಯಿತು. ಗತಾ ಸಭೆಯ ವರದಿಯನ್ನು ಗ್ರಾಮ ಪಂಚಾಯತ್ ಕಾರ್ಯದರ್ಶಿ ಸಂಜೀವ ಮಂಡಿಸಿದರ ವಾರ್ಡ್ ಸಭೆಯ ವಿವಿಧ ಬೇಡಿಕೆಗಳನ್ನು ಮಂಡಿಸಲಾ ವಿವಿಧ ಇಲಾಖೆಯ ಮಾಹಿತಿಯೊಂದಿಗೆ ನೂತನವಾಗಿ ಡಾಮಾರಿಕರಣಗೊಂಡ ಬಳ್ಳಮಂಜ ಪಣಕಜೆ ರಸ್ತೆಯಲ್ಲಿ ಗಣ ವಾಹನಗಳ ಓಡಾಟ ಅತಿಯಾಗಿದ್ದು, ಈ ರಸ್ತೆ ತೀರ ಹದಗೆಟ್ಟಿದ್ದು ಹಾಗೂ ಅಪಘಾತಗಳು ಸಂಭವಿಸುತ್ತಿದ್ದು ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಹೆಲ್ಮೆಟ್, ಲೈಸೆನ್ಸ್ ಇಲ್ಲದೆ ದ್ವಿಚಕ್ರ ವಾಹನಗಳು ಸಂಚರಿಸುತ್ತಿದ್ದು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಬಿಟ್ ಪೊಲೀಸರಲ್ಲಿ ಮ್ಯಾಕ್ಸಿಮ್ ಆಲ್ಬಕುಎರ್ಕ್ ವಿನಂತಿಸಿದರು.

ಮಚ್ಚಿನ ಗ್ರಾಮದ ಪುಚಪಾದೆ ಎಂಬಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದು ಈ ಭಾಗಕ್ಕೆ ಸಿ.ಸಿ ಕ್ಯಾಮೆರಾ ಅಳವಡಿಸುವಂತೆ ದಾಮೋದರ ಆಚಾರ್ಯ ಇವರು ವಿನಂತಿಸಿದರು. ಮಡಿಪಿರೇ. ಪೆಲತ್ತಜೆ ರಸ್ತೆ ದುರಸ್ತೆಗೆ ಹಲವು ಬಾರಿ ಮನವಿಯನ್ನು ನೀಡಿ ಒತ್ತಾಯಿಸಿದರು ಕೂಡ ಇನ್ನೂ ದುರಸ್ತಿಗೊಳಿಸದೇ ಇರೋದಕ್ಕೆ ಅಸಮಾಧಾನ ವನ್ನು ಮಂಜುಳಾ ಶರ್ಮಾ ಹೊರ ಹಾಕಿದರು. ಆ ಭಾಗದ ಸದಸ್ಯರನ್ನು ತರಾಟೆಗೆ ತೆಗೆದುಕೊಂಡರು.

ಕಲ್ಲಗುಡ್ಡೆ ಎಂಬಲ್ಲಿ ಮನೆಯ ತ್ಯಾಜ್ಯ ನೀರು ರಸ್ತೆಯಲ್ಲಿ ಹರಿಯುತ್ತಿದ್ದು ದುರ್ವಾಸನೆಯಿಂದ ಆರೋಗ್ಯಕ್ಕೆ ಹಾನಿಕರವಾಗುತ್ತಿದೆ ಎಂದು ಮರ್ಸೆಲ್ ಕಲ್ಲಗುಡ್ಡೆ ಇವರು ದೂರ ನೀಡಿದರು. ಮಚ್ಚಿನ ಬ್ಯಾಂಕ್ ಪೋಸ್ಟ್ ಗಳ ಸರಕಾರದಿಂದ ದೊರೆಯುವ ವಿವಿಧ ಸೌಲತ್ತುಗಳ ಬಗ್ಗೆ ಮಾಹಿತಿಗಾಗಿ ಜನರು ಒತ್ತಾಯಿಸಿದರು. ಈ ಬಗ್ಗೆ ಅವರಿಗೆ ಮಾಹಿತಿ ನೀಡಿದರು ಕೂಡ ಹಾಜರಾಗದೆ ಇರುವುದರರಾ ಬಗ್ಗೆ ಗ್ರಾಮ ಅಭಿವೃದ್ಧಿ ಅಧಿಕಾರಿಗಳು ತಿಳಿಸಿದರು. ವಿವಿಧ ಇಲಾಖೆಗಳು ಗ್ರಾಮ ಸಭೆಗೆ ಹಾಜರಾಗದೇ ಇರುವ ಬಗ್ಗೆ ಜನರು ಅಸಮಾಧಾನ ವ್ಯಕ್ತಪಡಿಸಿದರು.

ಜನರಿಗೆ ಸರಿಯಾದ ಮಾಹಿತಿಗಳು ಸಿಗುತ್ತಿಲ್ಲ, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ನೋಡಲ್ ಅಧಿಕಾರಿ ವಿನಯ ಪ್ರಸಾದ್ ಅವರಲ್ಲಿ ಒತ್ತಾಯಿಸಿದರು. ಮಚ್ಚಿನ ಪೇಟೆಯ ಸಾರ್ವಜನಿಕ ಶೌಚಾಲಯ ಸುದ್ದಿ ಪತ್ರಿಕೆಯಲ್ಲಿ ಪ್ರಕಟಗೊಂಡಿದ್ದು ಒಂದು ಉತ್ತಮ ಶೌಚಾಲಯ ನಿರ್ಮಾಣವಾಗಬೇಕೆಂದು ಮ್ಯಾಕ್ಸಿಮ್ ಆಲ್ಬಕುಎರ್ಕ್ ವಿನಂತಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷೆ ರುಕ್ಮಿನಿ ಮಾತನಾಡಿ ಗ್ರಾಮದ ಅಭಿವೃದ್ಧಿಗೆ ತಾವೆಲ್ಲರೂ ಕೈಜೋಡಿಸುವಂತೆ ಇನ್ನಷ್ಟು ಅಭಿವೃದ್ಧಿಗೆ ತಮ್ಮೆಲ್ಲರ ಸಹಕಾರವನ್ನು ಕೇಳಿಕೊಂಡರು.

ಕಾರ್ಯದರ್ಶಿ ಸಂಜೀವ ವರದಿ ಮಂಡಿಸಿದರು. ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಗೌರಿಶಂಕರ್ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷರಾದ ಸೋಮಾವತಿ ಗ್ರಾಮ ಪಂಚಾಯತ್ ಸದಸ್ಯರಾದ ಪ್ರಮೋದ್ ಕುಮಾರ್, ಚಂದ್ರಶೇಖರ್, ವಿಶ್ವರಾಜ್, ರವಿಚಂದ್ರ, ಚೇತನ್, ತಾರಾ, ಜಯಶ್ರೀ, ಡೀಕಮ್ಮ, ರಮ್ಯ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮಸ್ಥರು ಉಪಸ್ಥಿತರಿದ್ದರು. ಗುಣವತಿ ಧನ್ಯವಾದ ಕೋರಿದರು. ರಾಷ್ಟ್ರಗೀತೆಯೊಂದಿಗೆ ಗ್ರಾಮ ಸಭೆ ಮುಕ್ತಾಯಗೊಂಡಿತ್ತು. ✍️ ವರದಿ ಹರ್ಷ ಬಳ್ಳಮಂಜ

Exit mobile version