Site icon Suddi Belthangady

ಉಜಿರೆ: ಎನ್. ಎಸ್. ಎಸ್. ಘಟಕ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮ

ಉಜಿರೆ: ಎಸ್. ಡಿ. ಎಂ ಪಾಲಿಟೆಕ್ನಿಕ್ ಕಾಲೇಜಿನ ಎನ್. ಎಸ್. ಎಸ್. ಘಟಕದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭವು ಸ. ಪ. ಪೂ. ಕಾಲೇಜು, ಪ್ರೌಢ ಶಾಲೆ ವಿಭಾಗ ಗೇರುಕಟ್ಟೆಯಲ್ಲಿ ಜರಗಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಮರೇಶ್ ಹೆಬ್ಬಾರ್ ಪ್ರಭಾರ ಪ್ರಾಂಶುಪಾಲ ಎಸ್. ಡಿ. ಎಂ ಪಾಲಿಟೆಕ್ನಿಕ್ ಕಾಲೇಜು ಉಜಿರೆ ವಹಿಸಿದ್ದರು. ಕೇಶವ ಬಂಗೇರ ಉಪನ್ಯಾಸಕರು, ನಾರಾಯಣಗುರು ಪ. ಪೂ ಕಾಲೇಜು ಕುದ್ರೋಳಿ., ಇಂದಿರಾ ಗ್ರಾ. ಪಂ. ಉಪಾಧ್ಯಕ್ಷರು ಕಳಿಯ, ಸುರೇಂದ್ರ ಜೈನ್ ಕಳಿಯ ಬೀಡು, ಜನಾರ್ಧನ ಗೌಡ ಹಾಲು ಉತ್ಪಾದಕರ ಸಹಕಾರ ಸಂಘ ಅಧ್ಯಕ್ಷರು ಕಳಿಯ, ಈಶ್ವರಿ ಕೆ. ಉಪ ಪ್ರಾಂಶುಪಾಲರು ಸ. ಪ. ಪೂ. ಕಾಲೇಜು, ಪ್ರೌಢಶಾಲೆ ಗೇರುಕಟ್ಟೆ, ಬದ್ರುದ್ದೀನ್ ಆಟೋ ಮಾಲಕರ ಸಂಘದ ಅಧ್ಯಕ್ಷರು ಗೇರುಕಟ್ಟೆ ಹಾಗೂ ಎಸ್. ಡಿ. ಎಂ ಪಾಲಿಟೆಕ್ನಿಕ್ ಕಾಲೇಜಿನ ಯೋಜನಾಧಿಕಾರಿ ಪ್ರಕಾಶ್ ಗೌಡ ಹಾಗೂ ಉಪ ಯೋಜನಾಧಿಕಾರಿಗಳಾದ ಲೋಹಿತ್ ಮತ್ತು ಪುಷ್ಪಲತಾ ಪಿ. ಮುಂತಾದವರು ಉಪಸ್ಥಿತರಿದ್ದರು.

ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂಧಿಗಳು ಹಾಗೂ ಗೇರುಕಟ್ಟೆ ಪ್ರೌಢಶಾಲೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂಧಿಗಳು ಹಾಗೂ ಕಾಲೇಜಿನ ಹಳೆ ವಿದ್ಯಾರ್ಥಿಗಳು ಮತ್ತು ಶಿಬಿರಾರ್ಥಿಗಳು ಭಾಗವಹಿಸಿದ್ದರು.

Exit mobile version