Site icon Suddi Belthangady

ಉಜಿರೆ: ಮಾನಸ ಜಿ. ಶೆಟ್ಟಿರವರಿಗೆ ಪಿ. ಹೆಚ್. ಡಿ ಪದವಿ

ಉಜಿರೆ: ಮಣಿಪಾಲ್ ಸ್ಕೂಲ್ ಆಫ್ ಲೈಫ್ ಸೈನ್ಸ್ (MAHE) ನ ಬಯೋಫಿಸಿಕ್ಸ್ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಮಾನಸ ಜಿ. ಶೆಟ್ಟಿ ಅವರು ” 2,2″- ಬೈಪಿರಿಡಿನ್ / 1,10- ಫಿನ್ಯಾಂಥ್ರೋಲಿನ್ ಹೈಡ್ರೋಕ್ಸಮಿಕ್ ಆಸಿಡ್ ಸಂಬಂಧಿತ ರಚನೆ, ಸಂಶ್ಲೇಷಣೆ ಮತ್ತು ಕ್ಯಾನ್ಸರ್ ವಿರೋಧಿ ಪರಿಣಾಮಗಳ ಮೌಲ್ಯಮಾಪನ ಎಂಬ ಮಹಾ ಪ್ರಬಂಧಕ್ಕೆ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ಸ್ (MAHE) ಪಿ.ಎಚ್‌.ಡಿ ಪದವಿ ಪ್ರಧಾನ ಮಾಡಿದೆ.

ಈ ಸಂಶೋಧನೆಗೆ ಮಾರ್ಗದರ್ಶನ ನೀಡಿದವರು ಡಾ. ಬಬಿತ ಕೆ. ಎಸ್., ಬಯೋಫಿಸಿಕ್ಸ್ ವಿಭಾಗದ ಮುಖ್ಯಸ್ಥೆ ಮತ್ತು ಸಹಾಯಕ ಪ್ರಾಧ್ಯಾಪಕೆ. ಇವರು ಉಡುಪಿ ಜಿಲ್ಲೆಯ ದೆಂದೂರು ಗ್ರಾಮದ ಸೂರಜ್ ಶೆಟ್ಟಿಯವರ ಪತ್ನಿ ಮತ್ತು ಉಜಿರೆ ಸಿದ್ದವನ ಸನ್ನಿಧಿಯ ಗಂಗಾಧರ ಶೆಟ್ಟಿ ಹಾಗೂ ವಸಂತಿ ಜಿ. ಶೆಟ್ಟಿಯವರ ಪುತ್ರಿ. ಪ್ರಸ್ತುತ ಇವರು ನೆದರ್ ಲ್ಯಾಂಡ್ ನಲ್ಲಿ ನೆಲೆಸಿದ್ದಾರೆ.

Exit mobile version