Site icon Suddi Belthangady

ಉಜಿರೆ: ಫನಾತೀರ್ ಮಾಲ್ & ಲಾಡ್ಜಿಂಗ್ ಹೊಸ ಆಡಳಿತದೊಂದಿಗೆ ಶುಭಾರಂಭ

ಉಜಿರೆ: ಗುರುವಾಯನಕೆರೆಯಲ್ಲಿ ಕಳೆದ 8 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಫನಾತೀರ್ ಮಾಲ್ ಹಾಗೂ ಕಳೆದ ವರ್ಷ ಕುವೆಟ್ಟು ಬಳಿ ಉದ್ಘಟನೆಗೊಂಡ ಎಫ್. ಎಂ. ಗಾರ್ಡನ್ ಮಾಲಕ ಅಬ್ದುಲ್ ರಶೀದ್ ಅಬ್ಬಾಸ್ ರವರ ಮಾಲಕತ್ವದಲ್ಲಿ ಇದೀಗ ಉಜಿರೆಯಲ್ಲಿ ಚಾರ್ಮಾಡಿ ರಸ್ತೆ ಅಂಚೆ ಖಚೇರಿ ಎದುರು ಇರುವ ವಿಶ್ವಾಸ್ ಸಿಟಿ ಈಗ ಹೊಸ ಆಡಳಿತದೊಂದಿಗೆ ಫನಾತೀರ್ ಮಾಲ್ ಹೆಸರಿನೊಂದಿಗೆ ಫೆ. 12ರಂದು ಉದ್ಘಾಟನೆಗೊಂಡಿತು.

ಸುಣ್ಣತ್ ಕೆರೆಯ ಇಮಾಮಿ ಖತಿಬರು ಅಬೂಬಕ್ಕರ್ ಸಿದ್ದೀಕ್, ಸುಣ್ಣತ್ಕೆರೆ ಹುಸ್ತಾನ್ ಉಲ್ ಮದರಸಾದ ಮುಖ್ಯೋಪಾಧ್ಯಾಯ ಅಶ್ರಫ್ ಮುಸ್ಲಿಯಾರ್, ಸುಣ್ಣತ್ ಕೆರೆ ಸಖಾಫಿ ಅಧ್ಯಕ್ಷ ಅಬ್ದುಲ್ ರಹಿಮಾನ್, ಅಯೂಬ್ ಸಾದಿ ಅಧ್ಯಾಪಕ, ಅಲ್ ಮಸ್ಚಿದ್ ದುವಾ ಜುಮ್ಮಾ ಮಸೀದಿ ಅಧ್ಯಕ್ಷ ಅಬ್ದುಲ್ ಹಕೀಂ, ಬಿಲ್ಡರ್ ಸುಲೈಮಾನ್ ಸೇಟ್, ಯು. ಎ. ಹಮೀದ್, ಯು. ಎ. ಯಾಕೂಬ್, ಯು. ಕೆ. ಅಬೂಬಕ್ಕರ್, ಬಿ. ಎ. ಹಮೀದ್, ಉಮ್ಮರ್ ಕುಂಞ ಮುಸ್ಲಿಯಾರ್, ಜಮ್ಸಿರ್ ಅಹ್ಮದ್ ಖಾನ್, ಅಶ್ರಫ್ ಮುಸ್ಲಿಯಾರ್, ಬಷೀರ್ ಕಳಸ, ಗುರುವಾಯನಕೆರೆ ಮಸೀದಿ ಮಾಜಿ ಅಧ್ಯಕ್ಷ ಹಾಜಿ ಉಸ್ಮಾನ್, ಅಧ್ಯಕ್ಷ ಎಸ್. ಎಂ. ಎಸ್. ಲತೀಫ್, ಮಾಜಿ ಅಧ್ಯಕ್ಷ ಹನೀಫ್, ಕುವೆಟ್ಟು ಗ್ರಾಮ ಪಂಚಾಯತ್ ಸದಸ್ಯ ಸಮಿಯುಲ್ಲ,ಫಲಲುದ್ದೀನ್, ಕ್ರಿಸ್ಟಲ್ ಆಪ್ಟಿಕಲ್ಸ್ ನ ವಿಲಿಯಂ ಡಿಸೋಜ, ಷಾ ವುಡ್ ನ ಮಿರ್ಷಾದ್, ಜಿ.ಕೆ. ಶರಿಫ್, ವಿಶ್ವಾಸ್ ಸಿ.ಟಿ.ಅಂಗಡಿ ಮಾಲಕರು, ಫನಾತೀರ್ ಮಾಲ್ ನ ಮಾಲಕ ರಶೀದ್ ರವರ ಕುಟುಂಬಸ್ಥರು, ಎಫ್. ಎಂ. ಗಾರ್ಡನ್ ಸಿಬಂದಿಗಳು ಉಪಸ್ಥಿತರಿದ್ದು ಶುಭ ಹಾರೈಸಿದರು.

Exit mobile version