Site icon Suddi Belthangady

ಎಕ್ಸೆಲ್ ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಜೆ.ಇ.ಇ ಮೇನ್ಸ್ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ

ಗುರುವಾಯನಕೆರೆ: ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಜೆ.ಇ.ಇ. ಮೇನ್ಸ್ 2024-25 ನೇ ಸಾಲಿನ ಮೊದಲ ಹಂತದ ಪರೀಕ್ಷೆಯಲ್ಲಿ ಭಾಗವಹಿಸಿದ್ದು ವಿದ್ಯಾರ್ಥಿಗಳಾದ ಮೊಹಮ್ಮದ್ ಅಯ್ಮಾನ್ ಶೇ.99.2389953, ಪ್ರವಾನ್ ಪೊನ್ನಪ್ಪ ಶೇ.99.5808498, ನಿಶಾಂತ್ ಜೈನ್ ಶೇ.99.2168221, ಅನುಜ್ ಕೆ.ಎಸ್. ಶೇ 98.9591427, ಅರುಲ್ ಡಿಸೋಜಾ ಶೇ.98.9623029, ಮಹಮ್ಮದ್ ಸಫ್ವಾನ್ ಶೇ.98.8225410, ಸುಧನ್ವ ಶೇ.98.9342361 ಪರ್ಸಂಟೇಲ್ ಗಳಿಸುವುದರೊಂದಿಗೆ ಸಂಸ್ಥೆಗೆ ಕೀರ್ತಿಯನ್ನು ತಂದಿರುತ್ತಾರೆ.

ಜೆ. ಇ. ಇ ಪರೀಕ್ಷೆ ಬರೆದ 256 ವಿದ್ಯಾರ್ಥಿಗಳ ಪೈಕಿ 211 ವಿದ್ಯಾರ್ಥಿಗಳು ಜೆ.ಇ.ಇ. ಮೇನ್ಸ್ ಪರೀಕ್ಷೆಯಲ್ಲಿ ಅರ್ಹರಾಗಿ ಅಡ್ವಾನ್ಸ್ ಪರೀಕ್ಷೆ ಬರೆಯಲಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಎಕ್ಸೆಲ್ ಸಂಸ್ಥೆಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಪ್ರಾಂಶುಪಾಲರು ಹಾಗೂ ಬೋಧಕ ಬೋಧಕೇತರ ಸಿಬ್ಬಂದಿ ಮತ್ತು ಆಡಳಿತ ಮಂಡಳಿಯು ಅಭಿನಂದನೆಯನ್ನು ಕೋರಿದ್ದಾರೆ.

Exit mobile version