Site icon Suddi Belthangady

ಅನ್ವೇಷಣಾ ವಿಜ್ಞಾನ ಮತ್ತು ಇಂಜಿನಿಯರಿಂಗ್ ಮೇಳದಲ್ಲಿ ಬಹುಮಾನ

ಉಜಿರೆ: ಎಸ್.ಡಿ.ಎಂ ಇಂಜಿನಿಯರಿಂಗ್ ಕಾಲೇಜ್ ಮತ್ತು ಎಸ್.ಡಿ.ಎಂ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ತಂಡ ತಯಾರಿಸಿರುವ ‘EmpowHer’ ಎಂಬ ಪ್ರೊಜೆಕ್ಟ್, ಧಾರವಾಡದ ಎಸ್.ಡಿ.ಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಜ. 31 ಹಾಗೂ ಫೆ.1ರಂದು ನಡೆದ ಅನ್ವೇಷಣಾ ವಿಜ್ಞಾನ ಮತ್ತು ಇಂಜಿನಿಯರಿಂಗ್ 2024-25 ಮೇಳದಲ್ಲಿ, ಸಮಾಧಾನಕರ ಬಹುಮಾನ ಪಡೆದುಕೊಂಡಿದೆ.

ಮಹಿಳಾ ಸುರಕ್ಷತೆಯ ಮೇಲೆ ಕೇಂದ್ರೀಕರಿಸಿದ ಈ ಪ್ರೊಜೆಕ್ಟ್ ನ್ನು ಕಾಲೇಜಿನ ವಿದ್ಯಾರ್ಥಿಗಳಾದ ಸಾಗರ್ ಮತ್ತು ಸೃಜನ್ ಹಾಗೂ ಆಂಗ್ಲ ಮಾಧ್ಯಮ ಶಾಲೆಯ ಜೋಯನ್ ಮತ್ತು ಅರ್ನವ್ ನಾಯಕ್, ಎಲೆಕ್ಟ್ರಾನಿಕ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಮಹೇಶ್ ಮಾರ್ಗದರ್ಶನದಲ್ಲಿ ಅಭಿವೃದ್ಧಿಪಡಿಸಿದ್ದಾರೆ. ವಿದ್ಯಾರ್ಥಿಗಳನ್ನು ಪ್ರಾಂಶುಪಾಲರು ಮತ್ತು ಆಡಳಿತ ಮಂಡಳಿ ಅಭಿನಂದಿಸಿರುತ್ತಾರೆ.

Exit mobile version