Site icon Suddi Belthangady

ನಾಳ ಸ. ಹಿ. ಪ್ರಾ. ಶಾಲಾ ಹಿರಿಯ ವಿದ್ಯಾರ್ಥಿಗಳ ಸಮಾಗಮ

ಗೇರುಕಟ್ಟೆ: ಸ. ಹಿ. ಪ್ರಾ. ಶಾಲೆ ನಾಳ ಇಲ್ಲಿನ ಹಿರಿಯ ವಿದ್ಯಾರ್ಥಿಗಳ ಸಮಾಗಮ ಫೆ. 9ರಂದು ನಡೆಯಿತು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರವಿಕಿರಣ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವಿದ್ಯಾರ್ಥಿ ವಸಂತ ರಾಯಿಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗುರುವಾಯನಕೆರೆ ವಲಯ ಸಿ. ಆರ್. ಪಿ ರಾಜೇಶ್, ಹಳೆವಿದ್ಯಾರ್ಥಿ ಸಂಘದ ಧ್ಯೇಯ, ಉದ್ದೇಶಗಳು, ಕಾರ್ಯನಿರ್ವಗಿಸಬೇಕಾದ ಬಗ್ಗೆ ಮಾಹಿತಿ ನೀಡಿದರು.

ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಉಪಾಧ್ಯಕ್ಷೆ ರೀತಾ ಚಂದ್ರಶೇಖರ್ ಉಪಸ್ಥಿತರಿದ್ದರು.
ಹಿರಿಯ ವಿದ್ಯಾರ್ಥಿಗಳಾದ ರಾಜೇಶ್ ಪೆಂರ್ಬುಡ, ನಾಸೀರುದ್ದೀನ್ ಜಾರಿಗೆಬೈಲು, ದಿವ್ಯಾ ನಾಳ ಶಾಲಾ ದಿನಗಳ ಮೆಲುಕು ಹಾಕಿದರು.
ಈ ಸಂದರ್ಭದಲ್ಲಿ ಮುಂದಿನ 2 ವರ್ಷಗಳ ಅವಧಿಗೆ ಸಂಘದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ನೂತನ ಅಧ್ಯಕ್ಷರಾಗಿ ರಾಜೇಶ್ ಪೆಂರ್ಬುಡ ಅವರನ್ನು ಆಯ್ಕೆಮಾಡಲಾಯಿತು. ಉಪಾಧ್ಯಕ್ಷರಾಗಿ ಅಬ್ದುಲ್ ರಫೀಕ್ ಜಾರಿಗೆಬೈಲು, ಕಾರ್ಯದರ್ಶಿಯಾಗಿ ಗಣೇಶ್ ಬಿ. ನಾಳ, ಜತೆಕಾರ್ಯದರ್ಶಿಯಾಗಿ ದಿವ್ಯಾ ನಾಳ, ಕೋಶಾಧಿಕಾರಿಯಾಗಿ ಸಂದೀಪ್ ಗಾಣಿಗ ನಾಳ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ರವಿಕಿರಣ್, ಸೋಮಣ್ಣ ಗೌಡ ಕುಬಾಯ, ನಾಸೀರುದ್ದೀನ್ ಜಾರಿಗೆಬೈಲು, ಜಯಚಂದ್ರ ಗಂಪದಕೋಡಿ, ಸಮಿತಾ ನಾಳ, ಶಶಿಕಲಾ ನಾಳ, ಗೌರವ ಸಲಹೆಗಾರರಾಗಿ ವಸಂತ‌ ಮಜಲು, ಸುಧಾಕರ ಮಜಲು, ಅಬ್ದುಲ್ ಲತೀಫ್ ಪರಿಮ, ಕೇಶವ ಪೂಜಾರಿ ನಾಳ, ಅಶೋಕ ಆಚಾರ್ಯ ಗಂಪದಕೋಡಿ, ವಸಂತ ರಾಯಿಮಾರ್ ಅವರನ್ನು ಆಯ್ಕೆ ಮಾಡಲಾಯಿತು.

ಹರಿಶ್ಚಂದ್ರ ಗಂಪದಕೋಡಿ, ಶೋಭಾ ಆಚಾರ್ಯ ನಾಳ, ರಾಜೇಂದ್ರ ಮಡಿವಾಳ, ಇದ್ದರು.
ಸಹಶಿಕ್ಷಕಿ ಕವಿತಾ ಸ್ವಾಗತಿಸಿದರು. ಸಹಶಿಕ್ಷಕಿ ದಮಯಂತಿ ಕಾರ್ಯಕ್ರಮ ‌ನಿರೂಪಿಸಿದರು. ಮುಖ್ಯೋಪಾಧ್ಯಾಯ ರೋನಾಲ್ಡ್ ಪಿಲೀಫ್ ಡಿಮೆಲ್ಲೋ ಪ್ರಾಸ್ತಪಿಸಿ, ವಂದಿಸಿದರು.

Exit mobile version