ಆರಂಬೋಡಿ: ಮಂಗಳೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನೆ ಸೇಕ್ರೆಡ್ ಹಾರ್ಟ್ ಕಾಲೇಜು ಮಡಂತ್ಯಾರು ಇದರ ವಾರ್ಷಿಕ ವಿಶೇಷ ಶಿಬಿರ 2024-25 ನೇ ಸಾಲಿನ ಸಮಾರೋಪ ಸಮಾರಂಭವು ಫೆ.7ರಂದು ಜರುಗಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಡಂತ್ಯಾರು ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆಗಳ ಸಂಚಾಲಕ ಡಾ. ಸ್ಟ್ಯಾನಿ ಗೋವಿಯಸ್ ವಹಿಸಿ ” ಅನುಭವವೇ ಶ್ರೇಷ್ಠ ಶಿಕ್ಷಕ” ಎಂದು ಶಿಭಿರಾರ್ಥಿಗಳಿಗೆ ಸಂದೇಶ ಸಾರಿದರು.
ಮುಖ್ಯ ಅತಿಥಿಗಳಾಗಿ ಮೂಡಬಿದ್ರೆ ಆಳ್ವಾಸ್ ಕಾಲೇಜಿನ ಪ್ರಾಧ್ಯಾಪಕ ಡಾ. ಯೋಗೀಶ್ ಕೈರೋಡಿ ಮಾತನಾಡಿ “ಜೀವನದ ಮೌಲ್ಯಗಳನ್ನು ಹಾಗೂ ಧನಾತ್ಮಕ ಕಲಿಕೆಯನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವ ಕಾರ್ಯ ರಾಷ್ಟ್ರೀಯ ಸೇವಾ ಯೋಜನೆಯು ಮಾಡುತ್ತಿದೆ” ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಸುಶೀಲಾ ಕೆ., ಶಾಲಾಭಿವದ್ಧಿ ಸಮಿತಿಯ ಅಧ್ಯಕ್ಷ ಇಲಿಯಾಸ್ ಅಬ್ದುಲ್ ಹಕೀಂ, ಉಪಾಧ್ಯಕ್ಷ ಗಣೇಶ್ ಶೆಟ್ಟಿಗಾರ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಮೈರಬೆಟ್ಟು, ಉಪಾಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಉದ್ಯಮಿಗಳಾದ ಪ್ರಭಾಕರ ಶೆಟ್ಟಿ ಮೈರಬೆಟ್ಟು, ಪ್ರಗತಿಪರ ಕೃಷಿಕ ಉಮೇಶ್ ಪಾಳ್ಯ, ಸೇಕ್ರೆಡ್ ಹಾರ್ಟ್ ಕಾಲೇಜ್ ಮಡಂತ್ಯಾರಿನ ಪ್ರಾಂಶುಪಾಲ ಅಲೆಕ್ಸ್ ಐವನ್ ಸೀಕ್ವೇರಾ ಉಪಸ್ಥಿತರಿದ್ದರು.
ರಾಷ್ಟ್ರೀಯ ಸೇವಾ ಯೋಜನೆ ಸೇಕ್ರೆಡ್ ಹಾರ್ಟ್ ಕಾಲೇಜ್ ಮಡಂತ್ಯಾರು ಯೋಜನಾಧಿಕಾರಿಗಳು ಹಾಗೂ ಶಿಬಿರಾಧಿಕಾರಿಗಳಾದ ಪ್ರಶಾಂತ್ ಎಮ್. ಮತ್ತು ಜೀವಾ ವಿ. ಸಿ. ಹಾಗೂ ಘಟಕ ನಾಯಕನಾದ ನಿತೇಶ್, ಉಪನಾಯಕನಾದ ಶಾಹಿನ್ ಎಂ., ಕಾರ್ಯದರ್ಶಿ ಮೋನಿಕಾ, ಜೊತೆ ಕಾರ್ಯದರ್ಶಿ ಪ್ರಿಯಾಂಕ ಘಟಕ ನಾಯಕ ವಿಲಾಸ್ ಎಂ. ಭಟ್, ಉಪನಾಯಕ ಪ್ರೀತಂ ವಿಕ್ಟರ್ ಪಿರೇರಾ, ಕಾರ್ಯದರ್ಶಿ ದೀಕ್ಷಾ, ಜೊತೆ ಕಾರ್ಯದರ್ಶಿ ನಯನ ಉಪಸ್ಥಿತರಿದ್ದರು.
ಸ್ವಯಂಸೇವಕಿಯರ ಪ್ರಾರ್ಥನೆ ಗೀತೆಯೊಂದಿಗೆ ಈ ಕಾರ್ಯಕ್ರಮ ಶುರುವಾಯಿತು. ಆಗಮಿಸಿದ ಎಲ್ಲಾ ಅತಿಥಿಗಳನ್ನು ಸ್ವಯಂ ಸೇವಕ ನಿತೇಶ್ ಸ್ವಾಗತಿಸಿದರು.
ಸ್ವಯಂ ಸೇವಕರಾದ ವಿಲಾಸ್ ಹಾಗೂ ಪ್ರಜ್ವಿತ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ವಾರ್ಷಿಕ ವಿಶೇಷ ಶಿಬಿರದ 7 ದಿನದ ವರದಿಯನ್ನು ಘಟಕ ಮತ್ತು ಕಾರ್ಯದರ್ಶಿಗಳಾದ ಮೋನಿಕಾ ಮತ್ತು ದೀಕ್ಷಾ ವಿವರಿಸಿದರು.
ಕಾರ್ಯಕ್ರಮದ ನಿರೂಪಣೆಯನ್ನು ಸ್ವಯಂ ಸೇವಕ ಕೀರ್ತನ್ ಹಾಗೂ ಸ್ವಯಂ ಸೇವಕಿ ಅನುಷಾ ನೆರವೇರಿಸಿದರು.
ಯೋಜನಾಧಿಕಾರಿ ಪ್ರಶಾಂತ್ ಎಂ. ಉಪಕಾರ ಸ್ಮರಣೆ ಜೊತೆಗೆ ಆಗಮಿಸಿದ ಅತಿಥಿಗಳನ್ನು ವಂದಿಸಿದರು.