Site icon Suddi Belthangady

ಪುತ್ತಿಲ ನಡುಕೇರ ತರವಾಡು ಟ್ರಸ್ಟ್ ಸಭೆ, ಸನ್ಮಾನ

ಪುತ್ತಿಲ: ನಡುಕೇರ ತರವಾಡು ಟ್ರಸ್ಟ್ ಆಶ್ರಯದಲ್ಲಿ ಫೆ. 9ರಂದು ಮೂಲ ತರವಾಡು ಮನೆಯಲ್ಲಿ ಪೂರ್ವಹ್ನ ನಾಗತಂಬಿಲ ದೈವಗಳಿಗೆ ಪರ್ವ ಸೇವೆ, ಅಗೇಲು ಸೇವೆ ಜರಗಿತು. ತರವಾಡು ಟ್ರಸ್ಟ್‌ನ ಸಭೆಯು ಟ್ರಸ್ಟ್ ಅಧ್ಯಕ್ಷ ಆನಲ್ಲೆ ಶೇಖರ ಪೂಜಾರಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಕುಟುಂಬದ ಹಿರಿಯರೂ, ಯಜಮಾನ ಕೇರ್ಯ ರಾಮಪ್ಪ ಪೂಜಾರಿಯವರನ್ನೂ, ಕುಟುಂಬದ ಸದಸ್ಯ ರಿತೇಶ್ ಕುಮಾರ್‌ ಅವರ ಹೆತ್ತವರಾದ ಕೆ. ರಾಮಣ್ಣ ಪೂಜಾರಿ ಕೊಯ್ಯುರು, ಶಾಂತಿ ದಂಪತಿಯನ್ನು ಕ್ರೀಡಾಪಟು ಲಿಶನ್ ಪುರಿಯ, ಸುಪ್ರೀತ್ ನಡುಕೇರ ಇವರನ್ನು ಸನ್ಮಾನಿಸಲಾಯಿತು.

ಅಕ್ಷಿತಾ ಬೇನಪ್ಪು ಸನ್ಮಾನ ಪತ್ರ ವಾಚಿಸಿದರು. ದೈವಗಳಿಗೆ ಪರಿಚಾಲಕರಾಗಿ ಜಯಾನಂದ ಆನಲ್ಕೆ ಸೇವೆಗೈದರು. ಕುಟುಂಬಸ್ಥರು ಭಾಗವಹಿಸಿದ್ದರು. ಕಾರ್ಯಕ್ರಮ ಸಂಯೋಜಕ ಸತೀಶ್ ಮಿತ್ತೇರಿಪಾದೆ ಸ್ವಾಗತಿಸಿ, ಚಂದ್ರಶೇಖರ ಮಿತ್ತೇರಿಪಾದೆ ವಂದಿಸಿದರು.

Exit mobile version