ಕಡಿರುದ್ಯಾವರ: ಗ್ರಾಮದ ಮರಿಪಾದೆ ಬಳಿಯ ಬೆದುರುಮಾರು ಸೀನಪ್ಪ ಗೌಡರ ರಬ್ಬರ್ ತೋಟಕ್ಕೆ ಆಕಸ್ಮಿಕ ಬೆಂಕಿ ತಗುಲಿ ಸರಿಸುಮಾರು 150ಕ್ಕೂ ಅಧಿಕ ಮರಗಳಿಗೆ ಹಾನಿಯುಂಟಾಗಿದೆ. ಫೆ. 10ರಂದು ಮಧ್ಯಾಹ್ನ ಬೆಂಕಿ ಬಿದ್ದ ಘಟನೆ ನಡೆದಿದೆ.
ಮತ್ತು ಕಾನರ್ಪ ಕೋಡಿಯಾಲ್ ಬೈಲು ಶಾಲಾ ಹಿಂಭಾಗದ ಗುಡ್ಡಕ್ಕೆ ಬೆಂಕಿ ಬಿದ್ದ ಪ್ರಕರಣ ಫೆ. 10ರಂದು ರಾತ್ರಿ ನಡೆದಿದೆ. ಕಿಡಿಗೇಡಿಗಳು ಬೆಂಕಿ ಹಾಕಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳೀಯರು ಬೆಂಕಿಯನ್ನು ಹತೋಟಿಗೆ ತರಲು ಹರ ಸಾಹಸಪಟ್ಟು ಹೆಚ್ಚಿನ ಹಾನಿ ಉಂಟಾಗುವುದನ್ನು ತಪ್ಪಿಸಿದರು.