Site icon Suddi Belthangady

ಉಪಾಸನಾ ಫೌಂಡೇಶನ್ ಮುಖ್ಯಸ್ಥ ಸದ್ಗುರು ಶ್ರೀ ರಾಮ ಶ್ರೀ ಕ್ಷೇತ್ರ ಧರ್ಮಸ್ಥಳ ಭೇಟಿ

ಧರ್ಮಸ್ಥಳ: ಬೆಂಗಳೂರಿನ ಉಪಾಸನಾ ಫೌಂಡೇಶನ್ ಮುಖ್ಯಸ್ಥ ಸದ್ಗುರುಶ್ರೀ ರಾಮ ರವರು ಫೆ.10ರಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದರು.

ಇದೇ ವೇಳೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಸಮಾಲೋಚಿಸಿದರು.

ಶ್ರೀ ಕ್ಷೇತ್ರದ ವತಿಯಿಂದ ಹೆಗ್ಗಡೆಯವರು ಸದ್ಗುರುಶ್ರೀ ರಾಮರವರನ್ನು ಗೌರವಿಸಿದರು. ಶ್ರೀ ಉಪಾಸಕಾ ಎಂ. ಪಿ. ಧರ್ಮತೇಜ ಮತ್ತಿತರು ಉಪಸ್ಥಿತರಿದ್ದರು.

ಸದ್ಗುರು ಶ್ರೀ ರಾಮರವರು ಸೌತಡ್ಕ ದೇವಸ್ಥಾನ ಹಾಗೂ ಸೂರ್ಯ ದೇವಸ್ಥಾನಕ್ಕೂ ಭೇಟಿ ನೀಡಿದರು.

Exit mobile version