Site icon Suddi Belthangady

ಶ್ರೀ ಗುರು ನಾರಾಯಣಸ್ವಾಮಿ ಸೇವಾ ಸಂಘ – ಗುರು ಪೂಜೆ, ಸತ್ಯನಾರಾಯಣ ಪೂಜೆ

ತೋಟತ್ತಾಡಿ: ಶ್ರೀ ಗುರು ನಾರಾಯಣಸ್ವಾಮಿ ಸೇವಾ ಸಂಘ ಚಿಬಿದ್ರೆ. ಇದರ ವತಿಯಿಂದ ಫೆ. 9ರಂದು ಸಂಘದ ವಾರ್ಷಿಕೋತ್ಸವದ ಪ್ರಯುಕ್ತ ಗುರು ಪೂಜೆ ಮತ್ತು ಸತ್ಯನಾರಾಯಣ ಪೂಜೆಯು ಕಂಕನಾಡಿ ಗರಡಿಯ ಪ್ರಧಾನ ಅರ್ಚಕ ಹರೀಶ್ ಶಾಂತಿ ಇವರ ನೇತೃತ್ವದಲ್ಲಿ ನಡೆಯಿತು.

ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಸನತ್ ಕುಮಾರ್ ಮೂರ್ಜೆ ವಹಿಸಿದರು. ಮುಖ್ಯ ಅತಿಥಿಗಳಾಗಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಸುವರ್ಣ, ಕರ್ನಾಟಕ ಬ್ಯಾಂಕ್ ನ ನೆರಿಯ ಶಾಖಾ ವ್ಯವಸ್ಥಾಪಕ ರಾಜೇಶ್ ಪಿ. ಬಿ., ಚಾರ್ಮಾಡಿ ಗ್ರಾಮ ಪಂಚಾಯಿತಿನ ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ ಜಿ., ಸಿವಿಲ್ ಇಂಜಿನಿಯರ್ ಶೈಲೇಶ ಆರ್. ಜೆ., ತೋಟತ್ತಾಡಿ ಸಂಘದ ಗೌರವಾಧ್ಯಕ್ಷ ತಿಮ್ಮಪ್ಪ ಪೂಜಾರಿ ಹಾರಗಂಡಿ, ನೆರಿಯ ಸಹಕಾರಿ ಸಂಘದ ಅಧ್ಯಕ್ಷ ರಾಮ್ ಕುಮಾರ್ ಬೊವಿನಡಿ, ಚಾರ್ಮಾಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಯಶೋಧರ ಪೂಜಾರಿ ವಲಸರಿ, ಯುವ ವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷ ಗುರುರಾಜ್ ಗುರಿಪಳ್ಳ, ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ ಇದರ ನಿರ್ದೇಶಕ ಸಂತೋಷ್ ಮಿಯ್ಯಾರು, ಮಹಿಳಾ ಬಿಲ್ಲವ ವೇದಿಕೆ ತೋಟತ್ತಾಡಿ ಇದರ ಅಧ್ಯಕ್ಷೆ ಪ್ರೇಮ, ಯುವ ಬಿಲ್ಲವ ವೇದಿಕೆಯ ಅಧ್ಯಕ್ಷ ಸುಕೇಶ್ ಪೂಜಾರಿ ಪರಾರಿ, ಸಂಘದ ಕಾರ್ಯದರ್ಶಿ ಹರೀಶ್ ಕುಮಾರ್ ವೇದಿಕೆಯಲ್ಲಿದ್ದರು.

ಪ್ರಮೀಳಾ ದೇಜಪ್ಪ ಪೂಜಾರಿ ವಾರ್ಷಿಕ ವರದಿ ಮಂಡಿಸಿದರು. ಕಳೆದ ಬಾರಿಯ 10ನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ 500ಕ್ಕಿಂತ ಮೇಲ್ಪಟ್ಟು ಅಂಕಗಳಿಸಿದ ಮೋಕ್ಷಿತಾ ಬುಲಪ್ಪುರವರನ್ನು ಗೌರವಿಸಲಾಯಿತು.

ಸುದೀಪ್ ಪ್ರಾಧ್ಯಾಪಕರು ಐ. ಐ. ಟಿ ಕಾಲೇಜು ತುಂಬೆ ಸ್ವಾಗತಿಸಿದರು. ಅನ್ವಿತಾ ಪ್ರಾರ್ಥನೆಗ್ಯೆದರು. ವಾಣಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಪವಿತ್ರ ಕಾರ್ಯಕ್ರಮ ನಿರೂಪಿಸಿ, ಅನ್ವಿತಾ ಧನ್ಯವಾದವಿತ್ತರು.

Exit mobile version