Site icon Suddi Belthangady

ನಾರಾವಿ ಮೀಸಲು ಅರಣ್ಯ ಪ್ರದೇಶದಲ್ಲಿ ಆಕಸ್ಮಿಕ ಬೆಂಕಿ – ಅರಣ್ಯ ಇಲಾಖೆಯಿಂದ ಬೆಂಕಿ ನಂದಿಸುವ ಕಾರ್ಯ

ನಾರಾವಿ: ಬೆಳ್ತಂಗಡಿ ವನ್ಯ ಜೀವಿ ವಲಯದ ಅಳದಂಗಡಿ ಶಾಖೆಯ ಶಿರ್ಲಾಲು ಮೇಲಿನ ನಾರಾವಿ ಮೀಸಲು ಅರಣ್ಯದ ಗುಡ್ಡದ ಹುಲ್ಲುಗಾವಲಿಗೆ ಫೆ. 9ರಂದು ಆಕಸ್ಮಿಕವಾಗಿ ಬೆಂಕಿ ಬಿದ್ದಿರುವ ಘಟನೆ ನಡೆದಿದೆ.

ಅರಣ್ಯ ಇಲಾಖೆಯ ಸಿಬ್ಬಂದಿಗಳು ರಾತ್ರಿ ಕಾರ್ಯಚರಣೆ ನಡೆಸಿ ನಿಯಂತ್ರಣಕ್ಕೆ ತಂದಿದ್ದಾರೆ. ಬೆಳ್ತಂಗಡಿ ವನ್ಯಜೀವಿ ವಲಯದ ವಲಯ ಅರಣ್ಯ ಅಧಿಕಾರಿ ಶರ್ಮಿಷ್ಠ ಇವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯ ಅಧಿಕಾರಿ ಹರಿಪ್ರಸಾದ್, ಗಸ್ತು ಅರಣ್ಯ ಪಾಲಕ ಹೇಮಂತ್ ಕುಮಾರ್, ಅರಣ್ಯ ವೀಕ್ಷಕ ಬಸವರಾಜ್, ಸಿಬ್ಬಂದಿಗಳಾದ ಸಂದೇಶ್, ಸಜಿತ್, ವಾಹನ ಚಾಲಕ ಹರೀಶ ಭಾಗವಹಿಸಿದರು.

ಮುಂಜಾಗ್ರತ ಕ್ರಮವಾಗಿ ವಲಯ ವ್ಯಾಪ್ತಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬೆಂಕಿ ರೇಖೆಗಳನ್ನು ನಿರ್ಮಾಣ ಮಾಡಿರುವ ಕಾರಣ ಹೆಚ್ಚಿನ ಹಾನಿ ಸಂಭವಿಸಿರುವುದಿಲ್ಲ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

Exit mobile version