ಕಡಿರುದ್ಯಾವರ: ಮುಂಡಾಜೆ-ದಿಡುಪೆ ರಸ್ತೆಯ ಕನಪಾಡಿ-ಇಂದಬೆಟ್ಟು ಕ್ರಾಸ್ ಸಮೀಪ ಪಾದಚಾರಿ ಕಡಿರುದ್ಯಾವರದ ಅಂತರ ಲೋಕಪ್ಪ ಗೌಡ(65) ಎಂಬವರಿಗೆ ದಿಡುಪೆ ಮೂಲದ ವ್ಯಕ್ತಿ ಚಲಾಯಿಸುತ್ತಿದ್ದ ಬೈಕ್ ಡಿಕ್ಕಿ ಹೊಡೆದು, ಗಂಭೀರವಾಗಿ ಗಾಯಗೊಂಡ ಘಟನೆ ಫೆ.7 ರಂದು ನಡೆದಿದೆ.
ಗಾಯಾಳುವಿಗೆ ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದು ಚಿಕೆತ್ಸೆ ಫಲಕಾರಿಯಾಗದೆ ಫೆ. 8ರಂದು ಮೃತಪಟ್ಟಿದ್ದಾರೆ. ಮೃತರು ಪತ್ನಿ ಲಲಿತಾ, ಪುತ್ರ ಮನೋಹರ ಹಾಗೂ ಪುತ್ರಿ ಸುಹಾಸಿನಿರವರನ್ನು ಅಗಲಿದ್ದಾರೆ.