Site icon Suddi Belthangady

ಉಡುಪಿ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರಿಂದ ಅರ್ಚಕ ಕೆ. ರಮಾನಂದ ಭಟ್ ಕೊಕ್ಕಡ ಅವರಿಗೆ “ಶ್ರೀಕೃಷ್ಣಗೀತಾನುಗ್ರಹ” ಪ್ರಶಸ್ತಿ ಪ್ರಧಾನ

ಕೊಕ್ಕಡ: ಉಡುಪಿ ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ ಹಾಗೂ ತುಳು ಶಿವಳ್ಳಿ ಮಾಧ್ವಬ್ರಾಹ್ಮಣ ಮಹಾಮಂಡಲ ಸಹಯೋಗದಲ್ಲಿ ಶ್ರೀ ಮಧ್ವನವಮ್ಯುತ್ಸವ ಕಾರ್ಯಕ್ರಮದಲ್ಲಿ ಜಗದ್ಗುರು ಶ್ರೀಮನ್ಮದ್ವಾಚಾರ್ಯರ ಪಾದಸ್ಪರ್ಶದಿಂದ ಪಾವನಗೊಂಡ ವಿವಿಧ ಕ್ಷೇತ್ರಗಳ ಪೈಕಿ ಕೊಕ್ಕಡ ಶ್ರೀ ವೈದ್ಯನಾಥೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಕೆ. ರಮಾನಂದ ಭಟ್ ಅವರನ್ನು ಕ್ಷೇತ್ರಗಳ ಪ್ರತಿನಿಧಿಗಳ ಪರವಾಗಿ ಉಡುಪಿ ಶ್ರೀ ಪುತ್ತಿಗೆ ಮಠದ ಜಗದ್ಗುರು ಶ್ರೀ ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನಂನ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರು “ಶ್ರೀಕೃಷ್ಣಗೀತಾನುಗ್ರಹ” ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿದರು.

Exit mobile version