ಉಜಿರೆ: ರಸ್ತೆ ಸುರಕ್ಷತೆ ಎನ್ನುವ ವಿಷಯದಡಿ ರಾಷ್ಟ್ರಮಟ್ಟದ ಕಾರ್ಟೂನ್ ಸ್ಪರ್ಧೆಯಲ್ಲಿ ಉಜಿರೆಯ ಕಾರ್ಟೂನಿಸ್ಟ್ ಶೈಲೇಶ್ ಕುಮಾರ್ ವಿಶೇಷ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕಾರ್ಟೂನ್ ವಾಚ್ ಮ್ಯಾಗಜೀನ್ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಸಾವಿರಾರು ವ್ಯಂಗ್ಯ ಚಿತ್ರಗಾರರು ಭಾಗವಹಿಸಿದ್ದರು. ಇದರಲ್ಲಿ 26 ಕಾರ್ಟೂನ್ ಗಳನ್ನು ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದ್ದು, ಶೈಲೇಶ್ ಅವರಿಗೆ ವಿಶೇಷ ಪ್ರಶಸ್ತಿ ಲಭಿಸಿದೆ.
ಶೈಲೇಶ್ ರವರ ಸಾವಿರಾರು ವ್ಯಂಗ್ಯಚಿತ್ರ ದೇಶದ ವಿವಿಧ ದಿನಪತ್ರಿಕೆ, ವಾರಪತ್ರಿಕೆ, ಮಾಸಿಕಗಳಿಗಳಲ್ಲಿ ಪ್ರಕಟವಾಗಿದೆ. ಬೆಳ್ತಂಗಡಿಯ ಉಜಿರೆ ನಿವಾಸಿಯಾದ ಇವರು ಎಸ್. ಡಿ. ಎಂ ಕಾಲೇಜು ಉಜಿರೆಯಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸುದ್ದಿ ಬಿಡುಗಡೆ ಪತ್ರಿಕೆ ಮತ್ತು ಸುದ್ದಿ ಬಿಡುಗಡೆಯ ದೀಪಾವಳಿ ವಿಶೇಷಾಂಕಗಳ ಅಂದವನ್ನು ಶೈಲೇಶ್ ರವರ ಕಾರ್ಟೂನ್ ಹೆಚ್ಚಿಸಿದೆ.