Site icon Suddi Belthangady

ಫೆ. 9: ಅರಮಲೆಬೆಟ್ಟ ಶ್ರೀ ದೈವ ಕೊಡಮಣಿತ್ತಾಯ ದೈವಸ್ಥಾನದ ಪುನರ್ ಪ್ರತಿಷ್ಠಾ ಕುಂಭಾಭಿಷೇಕ – ಜಾತ್ರಾ ಮಹೋತ್ಸವದ ಪ್ರಯುಕ್ತ ಹೊರೆಕಾಣಿಕೆಯ ಭವ್ಯ ಶೋಭಾಯಾತ್ರೆ

ಬೆಳ್ತಂಗಡಿ: ಶ್ರೀ ಕ್ಷೇತ್ರ ಅರಮಲೆಬೆಟ್ಟ ದೈವಸ್ಥಾನದ ಬ್ರಹ್ಮಕುಂಭಾಭಿಷೇಕದ ಹೊರೆಕಾಣಿಕೆಯು ಭವ್ಯ ಮೆರವಣಿಗೆಯೊಂದಿಗೆ ಫೆ. 9ರಂದು ಸಂಜೆ 5 ಗಂಟೆಗೆ ಸಮರ್ಪಣೆಯಾಗಲಿದೆ.

ನವಶಕ್ತಿ ಕ್ರೀಡಾಂಗಣದಿಂದ ಶ್ರೀ ಕೊಡಮಣಿತ್ತಾಯ ದೈವಸ್ಥಾನ ಅರಮಲೆಬೆಟ್ಟಕ್ಕೆ ಹೊರಡುವ ಹೊರೆ ಕಾಣಿಕೆಯ ಭವ್ಯ ಮೆರವಣಿಗೆಯಲ್ಲಿ ವಿವಿಧ ವೇಷ ಭೂಷಣಗಳೊಂದಿಗೆ ವಿಶೇಷವಾಗಿ ಎಕ್ಸೆಲ್ ಕಾಲೇಜಿನ ಚೇರ್ ಮ್ಯಾನ್ ಸುಮಂತ್ ಕುಮಾರ್ ಅವರ ಸಹಕಾರದೊಂದಿಗೆ ನಮ್ಮ ದೇಸಿ ಕುಣಿತವಾದ ಕುಡುಮಶ್ರೀ ಫ್ರೆಂಡ್ಸ್ ಧರ್ಮಸ್ಥಳದ ಹಾಗೂ ಮಂಗಳೂರಿನ ಪ್ರಸಿದ್ಧ ಹುಲಿ ಕುಣಿತಗಾರರಿಂದ ಆಕರ್ಷಣೆಯ ಹುಲಿ ಕುಣಿತ, ಕನಿಷ್ಠ 20 ಮಂದಿ ಇರುವ 10 ಭಜನಾತಂಡ, ಸೃಷ್ಠಿ ಆರ್ಟ್ಸ್ ನವರ ಯಕ್ಷಗಾನದ ವೇಷ, ಚೆಂಡೆ ವಾದ್ಯಗಳ ತಂಡದೊಂದಿಗೆ ಭವ್ಯ ಮೆರವಣಿಗೆ ಸಾಗಲಿದ್ದು ಬ್ರಹ್ಮಕುಂಭಾಭಿಷೇಕಕ್ಕೆ ನೀಡುವ ಹೊರೆಕಾಣಿಕೆಯನ್ನು ಬೆಳಿಗ್ಗೆ 9ರಿಂದ ಮಧ್ಯಾಹ್ನ 2ರ ತನಕ ಪಡಂಗಡಿ ಪೊಯ್ಯೆಗುಡ್ಡೆಯ ಶ್ರೀ ಅಯ್ಯಪ್ಪ ಮಂದಿರ, ಓಡಿಲ್ನಾಳದ ಕಿರಾತಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಮದ್ದಡ್ಕದ ಶ್ರೀ ರಾಮ ಭಜನಾ ಮಂದಿರ, ಶಕ್ತಿನಗರದ ನವಶಕ್ತಿ ಕ್ರೀಡಾಂಗಣ ಹಾಗೂ ಗುರುವಾಯನಕೆರೆಯ ಹವ್ಯಕ ಭವನದಲ್ಲಿ ಗೌರವಪೂರ್ವಕವಾಗಿ ಸ್ವೀಕರಿಸಲಾಗುವುದು ಎಂದು ಕುಂಭಾಭಿಷೇಕ ಸಮಿತಿಯವರು ತಿಳಿಸಿದ್ದಾರೆ.

Exit mobile version