ಗುರುವಾಯನಕೆರೆ: ಅರಮಲೆಬೆಟ್ಟ ಶ್ರೀ ಕೊಡಮಣಿತ್ತಾಯ ದೈವಸ್ಥಾನದ ನೂತನ ಕಾರ್ಯಾಲಯ ಶುಭಾರಂಭಗೊಂಡಿದ್ದು, ಫೆ. 8ರಂದು ಯುವ ಉದ್ಯಮಿ ನವಶಕ್ತಿ ಸಾಯಿಪ್ರಸಾದ್ ಶೆಟ್ಟಿ ಉದ್ಘಾಟನೆ ಮಾಡಿದರು. ಅರಮಲೆಬೆಟ್ಟ ದೈವಸ್ಥಾನದ ಬ್ರಹ್ಮಕುಂಭಾಭೀಷೇಕ ಫೆ. 9ರಿಂದ 13ರವರೆಗೆ ನಡೆಯಲಿದ್ದು, ಈ ಹಿನ್ನೆಲೆ ಎಲ್ಲಾ ರೀತಿಯ ಅಭಿವೃದ್ಧಿ ಕಾಮಗಾರಿಗಳು ಭರದಿಂದ ಸಾಗುತ್ತಿದ್ದು, ನೂತನ ಕಾರ್ಯಾಲಯ ಇಂದಿನಿಂದಲೇ ಕಾರ್ಯನಿರ್ವಹಿಸಲಿದೆ.
ಗುರುವಾಯನಕೆರೆ ಎಕ್ಸೆಲ್ ಕಾಲೇಜು ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಅರಮಲೆ ಬೆಟ್ಟ ಅನುವಂಶಿಕ ಆಡಳಿತ ಮೊಕ್ತೇಸರರಾದ ಸುಕೇಶ್ ಕುಮಾರ್ ಶೆಟ್ಟಿ, ಕಡಂಬು ಸುನೀಶ್ ಕುಮಾರ್, ಎಸ್. ಡಿ. ಎಂ. ಐಟಿಐ ಶಿಕ್ಷಕ ರಾಮಚಂದ್ರ ಶೆಟ್ಟಿ, ಬ್ರಹ್ಮಕುಂಭಾಭೀಷೇಕ ಸಮಿತಿ ಕಾರ್ಯದರ್ಶಿ ಪಾಡ್ಯಾರು ಪುರಂದರ ಶೆಟ್ಟಿ, ಕೋಶಾಧಿಕಾರಿ ಪ್ರದೀಪ್ ಶೆಟ್ಟಿ, ಡಾ ಆನಂದ್ ಶೆಟ್ಟಿ, ವೈಭವ್ ಹಾರ್ಡ್ ವೇರ್ ಸೀತಾರಾಮ್ ಶೆಟ್ಟಿ, ಸುಭಾಷ್ ಚಂದ್ರ ಜೈನ್, ಪಾಡ್ಯಾರು ಬೀಡು ಪ್ರವೀಣ್, ಎಕ್ಸೆಲ್ ಕಾಲೇಜು ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕುವೆಟ್ಟು ಗ್ರಾಮಪಂಚಾಯತ್ ಸದಸ್ಯ ಬರಾಯ ನಿತಿನ್ ಕಾರ್ಯಕ್ರಮ ನಿರೂಪಣೆ ಮಾಡಿದರು.