Site icon Suddi Belthangady

ಕಾರು ಡಿಕ್ಕಿ ಹೊಡೆದು ವ್ಯಕ್ತಿ ಸಾವು

ಬೆಳ್ತಂಗಡಿ: ಕಾರು ಅಪಘಾತವಾಗಿ ವ್ಯಕ್ತಿ ಮೃತಪಟ್ಟ ಘಟನೆ ದಿಡುಪೆ ಬಳಿ ಫೆ. 5ರಂದು ನಡೆದಿದೆ.

ಮೃತರನ್ನು ಕುಕ್ಕಾವು ನಿವಾಸಿ ಪುತ್ತಾಕ ಇಬ್ರಾಹಿಂ (67) ಎಂದು ಗುರುತಿಸಲಾಗಿದೆ.

ಸಹೋದರ ಮನೆಯ ಶುಭ ಕಾರ್ಯ ನಿಮಿತ್ತ ಮಾತುಕತೆಗಾಗಿ ಬಂಧುಗಳು ಜೊತೆಯಾಗಿ ದಿಡುಪೆಗೆ ಹೋಗಿದ್ದರು. ಕಾರಿನಿಂದ ಇಳಿದ ಮುಂದಕ್ಕೆ ಚಲಿಸುತ್ತಿದ್ದಂತೆ ಹಠಾತ್ತನೆ ಕಾರು ಮುಂದಕ್ಕೆ ಚಲಿಸಿ ಈ ಅವಘಡ ಸಂಭವಿಸಿದೆ.

ಹಕೀಂ ಎಂಬವರು ವಾಹನ ಚಲಾಯಿಸುತ್ತಿದ್ದರೆಂದು ತಿಳಿದು ಬಂದಿದ್ದು ಅವರ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತದಿಂದ ಗಂಭೀರ ಗಾಯಗೊಂಡಿದ್ದ ಪುತ್ತಾಕ ಅವರನ್ನು
ತಕ್ಷಣ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಅವರು ಅಸುನೀಗಿದ್ದಾರೆ.
ಮೃತರು ಪತ್ನಿ ರುಕ್ಯಾ, ಮಕ್ಕಳಾದ ರಫೀಕ್, ಝುಬೈದಾ ಮತ್ತು ಮಜೀದ್ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.
ಮೃತರ ಅಂತ್ಯಸಂಸ್ಕಾರ ಫೆ. 6ರಂದು ಕಾಜೂರಿನ ದಫನ ಭೂಮಿಯಲ್ಲಿ ನಡೆಯಿತು

Exit mobile version