Site icon Suddi Belthangady

ಸಸಿಹಿತ್ಲು ಸುವರ್ಣ ಸಿರಿ ಸ್ಪರ್ಧೆಯಲ್ಲಿ ಮುಂಡೂರು ಬಿಲ್ಲವ ಸಂಘ ತೃತೀಯ

ಬೆಳ್ತಂಗಡಿ: ಸಸಿಹಿತ್ಲು ಶ್ರೀ ಗುರುನಾರಾಯಣ ಸಂಘದ ಸುವರ್ಣ ಮಹೋತ್ಸವ ವರ್ಷಾಚರಣೆಯ ಅಂಗವಾಗಿ ಸುವರ್ಣ ಮಹೋತ್ಸವದ ಸವಿ ನೆನಪಿಗೆ ಕಡಲತಡಿಯ ಗ್ರಾಮದಲ್ಲಿ ವಿಶ್ವಭಿಲ್ಲವ, ತೀಯಾ, ಆರ್ಯ ಈಡಿಗರ, ದೀವರ ಹಾಗೂ 26 ಉಪ ಜಾತಿಗಳ ರಾಷ್ಟ್ರಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಾದ ‘ಸುವರ್ಣ ಸಿರಿ 2025’ ಸ್ಪರ್ಧೆಯಲ್ಲಿ ಬೆಳ್ತಂಗಡಿ ತಾಲೂಕನ್ನು ಪ್ರತಿನಿಧಿಸಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ, ಮುಂಡೂರು ಸ್ಪರ್ಧೆಯಲ್ಲಿ ಭಾಗವಹಿಸಿ, ತೃತೀಯ ಸ್ಥಾನದೊಂದಿಗೆ ನಗದು ಬಹುಮಾನ ಮತ್ತು ಟ್ರೋಫಿಯನ್ನು ಪಡೆದುಕೊಂಡಿತು.

ಸ್ಪರ್ಧೆಯಲ್ಲಿ ಸುಮಾರು 20ಕ್ಕಿಂತಲೂ ಹೆಚ್ಚು ತಂಡಗಳು ಭಾಗವಹಿಸಿದ್ದವು. ಸ್ಮಿತೇಶ್ ಎಸ್. ಬಾರ್ಯ ಈ ಸಾಂಸ್ಕೃತಿಕ ಕಾರ್ಯಕ್ರಮದ ನಿರ್ದೇಶನ ಮಾಡಿದ್ದು, ಚಂದ್ರಹಾಸ ಬಳೆಂಜ, ಸಹಕಾರ ನೀಡಿದ್ದಾರೆ.

Exit mobile version