Site icon Suddi Belthangady

75ನೇ ವರ್ಷದ ಸಂಭ್ರಮದಲ್ಲಿ ಮಡಂತ್ಯಾರು ನೂತನ್ ಕ್ಲೋತ್ ಸೆಂಟರ್ ಆಯೋಜಿಸಿದ ಲಕ್ಕಿ ಕೂಪನ್ ಡ್ರಾ ಬಹುಮಾನ ವಿತರಣೆ – ಮೆರಗು ನೀಡಿದ ವಾಲ್ಟರ್ ನಂದಳಿಕೆ ಮತ್ತು ಭೋಜರಾಜ ವಾಮಂಜೂರು – ಖ್ಯಾತ ಸಂಗೀತ ರಸ ಸಂಜೆಯಲ್ಲಿ ಮಿಂದ ಗ್ರಾಹಕರು

ಮಡಂತ್ಯಾರು : 75ನೇ ವರ್ಷದ ಸಂಭ್ರಮದಲ್ಲಿರುವ ನೂತನ್ ಕ್ಲೋತ್ ಸೆಂಟರ್ ಲಕ್ಕಿ ಕೂಪನ್ ಡ್ರಾ ವಿಜೇತರಿಗೆ ಬಹುಮಾನ ವಿತರಣೆಯು ಫೆ. 4ರಂದು ನಡೆಯಿತು.

1949 ರಲ್ಲಿ ಪ್ರಾರಂಭಗೊಂಡು 75 ವರ್ಷಾಚರಣೆಯಲ್ಲಿರುವ ಮಡಂತ್ಯಾರಿನ ನೂತನ್ ಕ್ಲೋತ್ ಸೆಂಟರ್ ಅತ್ಯುತ್ತಮ ಗುಣಮಟ್ಟದ ವಸ್ತ್ರ, ಮಿತದರ ವೈಶಿಷ್ಟ್ಯಕ್ಕೆ ಹೆಸರುವಾಸಿಯಾಗಿದ್ದು, ನೂತನ್ ಸಂಸ್ಥೆಯು ದಿ.ಜೆ.ಎಂ. ರೊಡ್ರಿಗಸ್ ರವರು ಕಳೆದ 75 ವರ್ಷಗಳ ಹಿಂದೆ ಪ್ರಾರಂಭಿಸಿ ನಂತರ ತಂದೆ ವಿ.ಎಂ. ರೊಡ್ರಿಗಸ್ ಮುನ್ನಡೆಸಿ ಇದೀಗ ರಾಜೇಶ್ ರೊಡ್ರಿಗಸ್ ಪ್ರಕಾಶ್ ರೊಡ್ರಿಗಸ್ ಸೇರಿಕೊಂಡು ಮುನ್ನಡೆಸಿಕೊಂಡು ಬರುತ್ತಿದ್ದಾರೆ.

ನ.1ರಿಂದ ಪ್ರತಿ 3000 ರೂ. ಮೊತ್ತದ ಖರೀದಿಗೆ ಒಂದು ಲಕ್ಕಿ ಕೂಪನ್ ಉಚಿತ ಪಡೆಯುವ ಅವಕಾಶ, ಪ್ರಥಮ ಬಹುಮಾನ 10 ಗ್ರಾಂ ಚಿನ್ನದ ನಾಣ್ಯ ಪ್ರಿಜಿತ್ ಕಡಬ, ದ್ವಿತೀಯ ಬಹುಮಾನ ಟಿ.ವಿ.ಎಸ್. ಜುಪಿಟರ್ ಹರೀಶ್ ವೇಣೂರು , ತೃತೀಯ 5 ಗ್ರಾಂ. ಚಿನ್ನದ ನಾಣ್ಯ ಸುನೀತಾ ಬಂಟ್ವಳ ಹಾಗೂ 75 ಸಮಾಧಾನಕರ ಬಹುಮಾನಕ್ಕೆ ಜ. 25ರಂದು ಡ್ರಾ ನಡೆದಿತ್ತು.

ದಯ್ಜಿ ವರ್ಲ್ಡ್ ಮೀಡಿಯಾ ನೆಟ್ ವರ್ಕ್ ಸಂಸ್ಥಾಪಕ ವಾಲ್ಟರ್ ನಂದಳಿಕೆ, ನವರಸ ರಾಜೆ ಖ್ಯಾತಿಯ ಚಲನ ಚಿತ್ರ ನಟ ಭೋಜರಾಜ ವಾಮಂಜೂರು ಭಾಗವಹಿ ಬ ವಿಶೇಷ ಆಕರ್ಷಣೆಯಾಗಿ ಮಂಗಳೂರಿನ ಖ್ಯಾತ ಸಂಗೀತ ಕಲಾ ವಿದರಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದಲ್ಲಿ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್ ಧರ್ಮ ಗುರು ಫಾ. ಸ್ಟ್ಯಾನಿ ಗೋವಿಯಸ್, ಶಾಶಕ ಹರೀಶ್ ಪೂಂಜ, ಕೆ. ಪಿ. ಸಿ. ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ತುಂಗಪ್ಪ ಬಂಗೇರ ಚಾರ್ಟೆಡ್ ಅಕೌಂಟೆಂಟ್ಗಳಾದ ರಾಮದಾಸ್ ರಾವ್, ವಿಗ್ನೇಶ್, ಯೂನಿಯನ್ ಬ್ಯಾಂಕ್ ಮ್ಯಾನೇಜರ್ ಅಶೋಕ್, ಮೆಸ್ಕಾಂ ಜೂನಿಯರ್ ಇಂಜಿನಿಯರ್ ಸಂತೋಷ್ ನಾಯಕ್, ಮಾಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಪುನಿತ್ ಕುಮಾರ್, ಮಡಂತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ರೂಪ, ಪುಂಜಾಲಕಟ್ಟೆ ವರ್ತಕರ ಸಂಘದ ಅಧ್ಯಕ್ಷ ಜಯಂತ್ ಶೆಟ್ಟಿ, ಬೇಬಿ ಫೈನಾನ್ಸ್ ಮಾಲಕ ಯೋಗೇಶ್ ಕಡ್ತಿಲ, ಎಂ. ಆರ್. ಸುಪಾರಿ ಮಾಲಕ ಹೈದರ್ ಬಿ. ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಜೆರಾಲ್ಡ್ ಮೊರಾಸ್, ಕಾರ್ಯದರ್ಶಿ ನೆಲ್ಸನ್ ಲಸ್ರಾದೊ, ಮಡಂತ್ಯಾರು ಪ್ರಕಾಶ್ ಎಲೆಕ್ಟ್ರಾನಿಕ್ಸ್ ಮಾಲಕ ಎಡ್ವಿನ್ ಡಯಸ್, ಮೋನಪ್ಪ ಪೂಜಾರಿ ಕಂಡೇಂತ್ಯರು,ತುಳಸೀದಾಸ್ ಪೈ, ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಫೆರ್ನಾಂಡಿಸ್ ಹಳ್ಳಿ ಮನೆ, ನಳಿನಿ ಶೆಟ್ಟಿ ಪ್ರಮೋದ್ ಕುಮಾರ್, ನಾರಾಯಣ ಪೂಜಾರಿ ಹೊಸಮನೆ, ರಾಜೇಶ್ ರೊಡ್ರಿಗಸ್, ಪ್ರಕಾಶ್ ರೊಡ್ರಿಗಸ್, ಲೊಲಿಟಾ ರೊಡ್ರಿಗಸ್, ಮ್ಯೂರಲ್ ರೊಡ್ರಿಗಸ್, ಸಿಬ್ಬಂದವರ್ಗದವರು, ಬಹುಮಾನ ವಿಜೇತರು, ಗ್ರಾಮಸ್ಥರು ಉಪಸ್ಥಿರಿದ್ದರು.

ಫಾ. ಸ್ಟ್ಯಾನಿ ಗೋವಿಯಸ್ ಆಶೀರ್ವಚನ ಗೈದರು. ಕಾರ್ಯಕ್ರಮ ವನ್ನು ನೆಲ್ಸನ್ ಮೋನಿಸ್ ನಿರ್ವಹಿಸಿ, ಸ್ವಾಗತಿಸಿದರು. ರಾಜೇಶ್ ರೊಡ್ರಿಗಸ್ ವಂದಿಸಿದರು.

Exit mobile version