Site icon Suddi Belthangady

ಮೊಗ್ರು: ಸ. ಕಿ. ಪ್ರಾ. ಶಾಲೆಯನ್ನು ದತ್ತು ಸ್ವೀಕಾರ

ಬೆಳ್ತಂಗಡಿ: ಸ. ಕಿ. ಪ್ರಾ. ಶಾಲೆ, ಮೊಗ್ರು ಇಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿರುವುದನ್ನು ಮನಗಂಡು ಶಾಲೆಯನ್ನು ಉನ್ನತೀಕರಿಸಿ, ಆಧುನಿಕ ಸೌಲಭ್ಯವನ್ನು ಒದಗಿಸುವ ಮೊಗ್ರು ಬೆಳ್ತಂಗಡಿ ಟ್ರಸ್ಟ್‌ನ್ನು ಸ್ಥಾಪನೆ ಮಾಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬೆಳ್ತಂಗಡಿಗೆ ಶಾಲೆಯನ್ನು ಅಭಿವೃದ್ದಿ ಮಾಡುವ ಪ್ರಸ್ತಾವ ಸಲ್ಲಿಸಲಾಯಿತು.

ಟ್ರಸ್ಟ್‌ನ ಮನವಿಯನ್ನು ಪುರಸ್ಕರಿಸಿ ಶಾಲಾ ದತ್ತು ಸ್ವೀಕಾರ ಅಧಿನಿಯಮದಡಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ ಬೆಳ್ತಂಗಡಿ ಹಾಗೂ ಮುಗೇರಡ್ಕ ಸ. ಶಾಲಾ ಸೇವಾ ಟ್ರಸ್ಟ್ ಮೊಗ್ರು ಬೆಳ್ತಂಗಡಿ ನಡುವೆ ಜ. 18ರಂದು ಕರಾರು ಒಪ್ಪಂದವನ್ನು ಮಾಡಿಕೊಳ್ಳಲಾಯಿತು. ಕರಾರು ಒಪ್ಪಂದದಂತೆ ಮು.ಸ.ಸಾ.ಸೇ ಟ್ರಸ್ಟ್ 2025-20256ರ ಶೈಕ್ಷಣಿಕ ವರ್ಷಕ್ಕೆ ಶಾಲೆಗೆ ವಿದ್ಯಾರ್ಥಿಗಳ ಪ್ರವೇಶ ಪ್ರೋತ್ಸಾಹಿಸುವುದರೊಂದಿಗೆ ಸರಕಾರದಿಂದ ಶಿಕ್ಷಣಕ್ಕೆ ಸಿಗುವ ಉಚಿತ ಸೌಲಭ್ಯವನ್ನು ಮಾಹಿತಿ ನೀಡುವುದರೊಂದಿಗೆ ಟ್ರಸ್ಟ್‌ನ ಪ್ರಾಯೋಜಕತ್ವದಲ್ಲಿ 2 ಆಂಗ್ಲ ಮಾಧ್ಯಮ ಭೋದನೆಗೆ 2 ಶಿಕ್ಷಕ/ಕಿಯರನ್ನು ನೇಮಿಸುವ ಆಧುನಿಕ ತಂತ್ರಜ್ಙಾನದ ಡಿಜಿಟಲ್ ಶಿಕ್ಷಣ ಸಾಮಾಗ್ರಿ ಒದಗಿಸುವುದು.

ಶಾಲಾ ವಾತಾವರಣದಲ್ಲಿ ಆಟದ ಸಾಮಾಗ್ರಿ ಒದಗಿಸುವುದು, ಶಾಲೆಗೆ ಬೇಕಾದ ಪೀಠೋಪಕರಣ ಹಾಗೂ ಶೈಕ್ಷಣಿಕ ಸಾಮಾಗ್ರಿ ಒದಗಿಸುವುದು, ಶಾಲಾ ಮಕ್ಕಳ ಪ್ರಯಾಣಕ್ಕೆ ಅನುಕೂಲವಾಗುವಂತೆ ವಾಹನ ವ್ಯವಸ್ಥೆಯನ್ನು ಒದಗಿಸುವುದರೊಂದಿಗೆ, ಯೋಗ , ಕ್ರೀಡೆ, ಸಾಂಸ್ಕೃತಿಕ ತರಬೇತಿ ಇನ್ನೀತರ ಸೌಲಭ್ಯದೊಂದಿಗೆ ಟ್ರಸ್ಟ್ ಸ. ಕಿ. ಪ್ರಾ. ಶಾಲೆ ಮೊಗ್ರು ಇದರ ಸರ್ವಾಂಗಿನ ಅಭಿವೃದ್ದಿಗೆ ಕಾರ್ಯ ನಿರ್ವಹಿಸಬಹುದು. ಎಂದು ಒಪ್ಪಂದ ಕರಾರಿನಲ್ಲಿ ಉಲ್ಲೇಖಿಸಲಾಯಿತ್ತು.

ಕರಾರು ಒಪ್ಪಂದ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಬೆಳ್ತಂಗಡಿ ಇದರ ಬಿ.ಇ.ಒ ತಾರಾಕೇಸರಿ, ಕಛೇರಿ ವ್ಯವಸ್ಥಾಪಕ ನರೇಶ್ ನಾಯ್ಕ, ಮು.ಸ.ಶಾ.ಸೇ.ಟ್ರಸ್ಟ್‌ನ ಅಧ್ಯಕ್ಷ ಕುಶಾಲಪ್ಪ ಗೌಡ ನೆಕ್ಕಾರಜೆ, ಜೊತೆ ಕಾರ್ಯದರ್ಶಿ ಉಮೇಶ ಗೌಡ ಪರಕ್ಕಜೆ ಉಪಸ್ಥಿತರಿದ್ದರು.

Exit mobile version