Site icon Suddi Belthangady

ಪುಂಚಪಾದೆಯಲ್ಲಿ ಪತ್ತೆಯಾಗಿದ್ದ ಬೈಕ್‌ನ ವಾರೀಸುದಾರರು ಪತ್ತೆ

ಬೆಳ್ತಂಗಡಿ: ಮಚ್ಚಿನ ಗ್ರಾಮದ ಕಲಾಯಿ ರಸ್ತೆ ಪುಂಚಪಾದೆಯಲ್ಲಿ ಪತ್ತೆಯಾಗಿದ್ದ ಎರಡು ಬೈಕ್‌ಗಳ ವಾರೀಸುದಾರರು ಪತ್ತೆಯಾಗಿದ್ದಾರೆ. ವಾರಿಸುದಾರರಿಲ್ಲದೆ ಎರಡು ದಿನದಿಂದ ಪುಂಚಪಾದೆಯಲ್ಲಿ ಪತ್ತೆಯಾಗಿದ್ದ ಬೈಕುಗಳನ್ನು ಸ್ಥಳೀಯರು ಹಾಗೂ ಗ್ರಾಮ ಪಂಚಾಯತ್ ಸದಸ್ಯ ದಿನೇಶ್ ಅವರು ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ಒಪ್ಪಿಸಿದ್ದರು.

ಇದೀಗ ಮಂಗಳೂರು ಸಂತ ಅಲೋಶಿಯಸ್ ಕಾಲೇಜ್‌ನ ಎನ್‌.ಸಿ.ಸಿ ವಿದ್ಯಾರ್ಥಿಗಳು ಪೊಲೀಸ್ ಠಾಣೆಗೆ ಭೇಟಿ ನೀಡಿ ಸಮರ್ಪಕ ದಾಖಲೆ ಒದಗಿಸಿ ಬೈಕ್ ಪಡೆದುಕೊಂಡಿದ್ದಾರೆ. ಟ್ರಕ್ಕಿಂಗ್‌ಗೆ ಆಗಮಿಸಿದ್ದ ವಿದ್ಯಾರ್ಥಿಗಳು ಬೈಕ್‌ಗಳನ್ನು ರಸ್ತೆ ಬದಿ ನಿಲ್ಲಿಸಿ ಹೋಗಿದ್ದರು ಎಂದು ತಿಳಿದು ಬಂದಿದೆ.

Exit mobile version