ವೇಣೂರು: ಯುವ ಸೇವಾ ಸಂಗಮ ಸೇವಾ ಟ್ರಸ್ಟ್ ವೇಣೂರು ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಮತ್ತು ಆಮಂತ್ರಣ ವಿತರಣೆ ಬಗ್ಗೆ ನಡೆದ ಸಭೆಯು ವೇಣೂರು ಪಂಚಾಯತ್ ಬಸ್ ಸ್ಟಾಂಡ್ ಸಭಾಂಗಣದಲ್ಲಿ ನಡೆಯಿತು.
ಆಮಂತ್ರಣ ಪತ್ರಿಕೆಯ ಬಿಡುಗಡೆಯನ್ನು ವೇಣೂರಿನ ಉದ್ಯಮಿ ಜಗದೀಶ್ ನಾಯಕ್ ನೇರವೇರಿಸಿದರು. ಪಂಚಾಯತ್ ಅಧ್ಯಕ್ಷೆ ಮಲ್ಲಿಕಾ ಕಾಶೀನಾಥ್ ಹೆಗ್ಡೆ, ವೇಣೂರು ಸಹಕಾರ ಸಂಘದ ಅಧ್ಯಕ್ಷ ಸುಂದರ ಹೆಗ್ಡೆ, ಪಂಚಾಯತ್ ಉಪಾಧ್ಯಕ್ಷ ಉಮೇಶ್ ನಡ್ತಿಕಲ್ಲು, ಯುವ ಸೇವಾ ಸಂಗಮ ಸೇವಾ ಟ್ರಸ್ಟ್ ನ ಅಧ್ಯಕ್ಷ ಕೆ. ವಿಜಯ ಗೌಡ ಕಾರ್ಯದರ್ಶಿ ಯೋಗೀಶ್ ಬಿಕ್ರೋಟ್ಟು, ಪ್ರಶಾಂತ್ ಹೆಗ್ಡೆ ಹಾಗೂ ಪಂಚಾಯತ್ ಸದಸ್ಯರುಗಳು, ಸಹಕಾರ ಸಂಘದ ನಿರ್ದೇಶಕರುಗಳು, ಸಂಘ ಸಂಸ್ಥೆಗಳ ನಿರ್ದೇಶಕರುಗಳು, ಯುವ ಸೇವಾ ಸಂಗಮ ಸೇವಾ ಟ್ರಸ್ಟ್ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.