ಬೆಳಾಲು: ಡಿ. ಪಿ ಸ್ಪೋರ್ಟ್ಸ್ ಕ್ಲಬ್ ಬೆಳಾಲು ಇದರ ಆಶ್ರಯದಲ್ಲಿ ಬೆಳ್ತಂಗಡಿ ತಾಲೂಕು ವಾಲಿಬಾಲ್ ಅಸೋಶಿಯೇಶನ್ ಇದರ ಸಹಯೋಗದೊಂದಿಗೆ 10ನೇ ವರ್ಷದ ತಾಲೂಕು ಮಟ್ಟದ ವಾಲಿಬಾಲ್ ಹಾಗೂ ವಲಯ ಮಟ್ಟದ ಪುರುಷರ ಹಾಗೂ ಮಹಿಳೆಯರ ವಿಭಾಗದ ಹಗ್ಗಜಗ್ಗಾಟ ಕಾರ್ಯಕ್ರಮ ಫೆ. 1ರಂದು ದೊಂಪದಪಲ್ಕೆ ಕ್ರೀಡಾಂಗಣದಲ್ಲಿ ನಡೆಯಿತು.
ಬೆಳಾಲು ಬುರಲ್ ಗುತ್ತು ಜೀವoದರ್ ಕುಮಾರ್ ಜೈನ್ ಸಭಾಧ್ಯಕ್ಷತೆ ವಹಿಸಿ ಸಂಘಟಕರಿಗೆ ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದರು. ಬೆಳಾಲು ಶ್ರೀ ಕ್ಷೇತ್ರ ಆರಿಕೋಡಿ ಧರ್ಮದರ್ಶಿಗಳಾದ ಹರೀಶ್ ಆರಿಕೋಡಿ ದೀಪೋಜ್ವಲನೆ ನೆರವೇರಿಸಿ, ಸಂಘಟನೆಯಿಂದ ಇನ್ನಷ್ಟು ಸಮಾಜಮುಖಿ ಕೆಲಸಗಳಾಗಲಿ, ಯಶಸ್ವಿ ಕಾರ್ಯಕ್ರಮ ಮೂಡಿ ಬರಲೆಂದು ಶುಭ ಹಾರೈಸಿದರು.
ಯುವ ಉದ್ಯಮಿಗಳಾದ ಕಿರಣ್ ಚಂದ್ರ ಡಿ. ಪುಷ್ಪಗಿರಿ ಕ್ರೀಡಾಂಗಣ ಉದ್ಘಾಟನೆ ನೆರವೇರಿಸಿ ಶುಭ ಹಾರೈಸಿದರು. ಸಂಚಾಲಕ ಬದುಕು ಕಟ್ಟೋಣ ಬನ್ನಿ ಸೇವಾಟ್ರಸ್ಟ್ ಉಜಿರೆ, ಲಕ್ಷ್ಮೀ ಗ್ರೂಪ್ ಕನಸಿನ ಮನೆ ಉದ್ಯಮಿಗಳಾದ ಕೆ. ಮೋಹನ್ ಕುಮಾರ್, ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜು ಅಧ್ಯಕ್ಷರಾದ ಬಿ. ಸುಮಂತ್ ಕುಮಾರ್ ಜೈನ್, ಬೆಳಾಲು ಗ್ರಾಮ ಪಂಚಾಯತ್ ಅಧ್ಯಕ್ಷ ವಿದ್ಯಾ ಶ್ರೀನಿವಾಸ್ ಗೌಡ, ಮೀನoದೇಲು ಜನರಲ್ ಸ್ಟೋರ್ ಉದ್ಯಮಿಗಳಾದ ಜಯಣ್ಣ ಗೌಡ, ಬೆಳಾಲು ಡಿ. ಪಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಯಶವಂತ್ ಗೌಡ, ಬೆಳಾಲು ಸಿ. ಎ ಬ್ಯಾಂಕ್ ಉಪಾಧ್ಯಕ್ಷ ದಿನೇಶ್ ಕೋಟ್ಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಾಲಿಬಾಲ್ ಆಟಗಾರರು, ನಿವೃತ್ತ ಸೇನಾನಿ ತೋಮಸ್ ಪಿ., ಶಿಲ್ಪಿಗಳಾದ ಶಶಿಧರ್ ಆಚಾರ್ಯ ಬೆಳಾಲು, ಕರಾಟೆ ಕ್ರೀಡಾಪಾಟು ಮಿಥುನ್ ಕಜೆ, ರಾಜ್ಯಮಟ್ಟದ ಕ್ರೀಡಾಪಟು ಜಾಹ್ನವಿ ಮಾಯಾ ಬೆಳಾಲು ಇವರನ್ನು ಸನ್ಮಾನಿಸಲಾಯಿತು. ಡಿ.ಪಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಯಶವoತ್ ಗೌಡ ಸ್ವಾಗತಿಸಿ, ವಾಣಿ ಕಾಲೇಜು ಉಪನ್ಯಾಸಕರಾದ ಬೆಳಿಯಪ್ಪ ಗೌಡ ಹಾಗೂ ಎಸ್.ಕೆ.ಡಿ.ಆರ್. ಡಿ.ಪಿ ಯೋಜನಾಧಿಕಾರಿಗಳಾದ ಗಿರೀಶ್ ಕುಮಾರ್ ಮoಜೊತ್ತು ನಿರೂಪಿಸಿ, ಡಿ.ಪಿ ಸ್ಪೋರ್ಟ್ಸ್ ಕ್ಲಬ್ ಕಾರ್ಯದರ್ಶಿ ಲೋಹಿತ್ ಕುಮಾರ್ ಸುರುಳಿ ಧನ್ಯವಾದವಿತ್ತರು.