Site icon Suddi Belthangady

ಫೆ. 3-7: ಶ್ರೀ ಕ್ಷೇತ್ರ ಓಡೀಲು ಶ್ರೀ ಮಹಾಲಿಂಗೇಶ್ವರ ಜಾತ್ರಾಮಹೋತ್ಸವ

ಪಡಂಗಡಿ: ಶ್ರೀ ಕ್ಷೇತ್ರ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಫೆ. 3 ರಿoದ 7ರವರೆಗೆ ಜರಗುವ ಜಾತ್ರಾಮಹೋತ್ಸವವು ಪ್ರಾರoಭಗೊoಡಿತು. ತಂತ್ರಿಗಳಾದ ಶ್ರೀ ಉದಯ ಪಾಂಗಣ್ಣಾಯ ನೇತೃತ್ವದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ ಎಂ. ರಘುರಾಮ್ ಭಟ್ ಮಠ ಉಪಸ್ಥಿತಿಯಲ್ಲಿ ದೇವತಾ ಪ್ರಾರ್ಥನಾ, ತೋರಣ ಮುಹೂರ್ತ, ದೇವರಿಗೆ ಪಂಚಾಮೃತ ಅಭಿಷೇಕ, ಗಣಹೋಮ, ನವ ಕಲಶಾಭಿಷೇಕ ಅಲಂಕಾರ ಪೂಜೆ, ಧ್ವಜಾರೋಹಣ ಮಧ್ಯಾಹ್ನ ಮಹಾಪೂಜೆ ನಿತ್ಯಬಲಿ ಪ್ರಸಾದ ವಿತರಣೆ ಸಾರ್ವಜನಿಕ ಅನ್ನ ಸಂತರ್ಪಣೆ ಜರಗಿತು.

ಸಮಿತಿಯ ಅಧ್ಯಕ್ಷ ದಿನೇಶ್ ಮೂಲ್ಯ ಕೊಂಡೆಮಾರು ಸದಸ್ಯರಾದ ಗೋಪಿನಾಥ್ ನಾಯಕ್ ಗುರುವಾಯನಕೆರೆ, ಸತೀಶ್ ಬಂಗೇರ ಕುವೆಟ್ಟು, ಹರಿಪ್ರಸಾದ್ ಇರ್ವತ್ರಾಯ ಓಡಿಲ್ನಾಳ, ಧನಂಜಯ ರಾವ್ ಗುರುವಾಯನಕೆರೆ, ಕೆ. ರಾಜು ಪಡoಗಡಿ, ಶಾoಭವಿ ಪಿ. ಬoಗೇರ, ಸವಿತಾ ಆಚಾರ್ಯ ಮುoಡಾಡಿ, ಜಾತ್ರಾ ಸಮಿತಿಯ ಗೌರಾಧ್ಯಕ್ಷ ಮಧೂರು ಕಲ್ಲೂರಾಯ, ಅಧ್ಯಕ್ಷ ಚಂದ್ರಹಾಸ ಕೇದೆ, ಉಪಾಧ್ಯಕ್ಷ ದಾಮೋದರ್ ಕುoದರ್ ಸಬರಬೈಲು, ಪ್ರಧಾನ ಕಾರ್ಯದರ್ಶಿ ಸೋಮನಾಥ ಬಿ. ಇಡ್ಯ ಜೊತೆ ಕಾರ್ಯದರ್ಶಿ ರಾಕೇಶ್ ರೈ ಬಿಯoತಿಮಾರು, ಕೋಶಾಧಿಕಾರಿ ಟಿ. ಕೃಷ್ಣ ರೈ ಸಬರಬೈಲು ಹಾಗೂ ಪಡಂಗಡಿ ಕುವೆಟ್ಟು ಓಡಿಲ್ನಾಳ ಸೋಣಂದೂರು ಗ್ರಾಮದ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Exit mobile version