Site icon Suddi Belthangady

ಹಿಂದೂ ಯುವ ಶಕ್ತಿ ಆಲಡ್ಕ ಕ್ಷೇತ್ರ ಅಳದಂಗಡಿ – ರಾಜಕೀಯ ರಹಿತ ಸಾಮಾಜಿಕ ಸೇವಾ ಸಂಘಟನೆಯ ಪ್ರಧಾನ ಕಚೇರಿ ಉದ್ಘಾಟನೆ – ಹಿಂದೂ ಯುವ ಶಕ್ತಿ ಸಂಘಟನೆಯಿಂದ ಸಮಾಜಮುಖಿ ಕಾರ್ಯ: ಕಿರಣ್ ಚಂದ್ರ ಡಿ. ಪುಷ್ಪಗಿರಿ

ಅಳದಂಗಡಿ: ಕೇದ್ದು ಸುಶೀಲಾ ಕಾಂಪ್ಲೆಕ್ಸ್ ನಲ್ಲಿ ಸಂಘಟನೆಯ ಪ್ರಧಾನ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಬೆಂಗಳೂರುರಿನ ಯುವ ಉದ್ಯಮಿಗಳು ವಾಗ್ಮಿಗಳು ಆಗಿರುವ ಕಿರಣ್ ಚಂದ್ರ ಡಿ. ಪುಷ್ಪಗಿರಿ ಇವರು ಮಾತನಾಡಿ ಸೇವೆಯೇ ಧರ್ಮಗಳಲ್ಲಿ ಶ್ರೇಷ್ಠ ಸೇವೆ ಎನಿಸುತ್ತದೆ, ಸೇವೆ ಮಾಡುವುದು ನಮ್ಮ ಕರ್ತವ್ಯ. ನಮ್ಮ ಬದುಕಿನ ಸಾರ್ಥಕಕ್ಕೆ ಸೇವೆ ಕಾರಣವಾಗುತ್ತದೆ. ಅನೇಕ ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡುವ ಮೂಲಕ ಈ ಸಂಘಟನೆ ಸಮಾಜಕ್ಕೆ ಮಾದರಿ ಮುಂದೆಯೂ ನಿಮ್ಮ ಪ್ರತಿಯೊಂದು ಸಾಮಾಜಿಕ ಕೆಲಸ ಕಾರ್ಯದಲ್ಲಿ ನಾನು ಕೂಡ ಬಾಗಿಯಾಗುವೆ ಎಂದು ಶುಭ ಹಾರೈಸಿದರು.

ಪ್ರಧಾನ ಕಚೇರಿಯ ಉದ್ಘಾಟನೆ ಮಾಡಿದ ಶ್ರೀ ಮಂಗಳಗಿರಿ ಕ್ಷೇತ್ರ ಮುಂಡುರಿನ ಧರ್ಮದರ್ಶಿ ರಾಜೀವ ಮುಂಡುರು, ಈ ಹಿಂದೂ ಯುವ ಶಕ್ತಿ ಆಲಡ್ಕ ಕ್ಷೇತ್ರ ಪ್ರಧಾನ ಕಚೇರಿಯಿಂದ ಸಮಾಜಕ್ಕೆ ಮಾದರಿಯಾಗುವ ಕೆಲಸ ಕಾರ್ಯಗಳು ನಡೆದು ರಾಜ್ಯ ಹಾಗೂ ದೇಶ ಮಟ್ಟದಲ್ಲಿ ಗುರುತಿಸುವಂತಾಗಲಿ ಎಂದು ಶುಭ ಹಾರೈಸಿದರು.

ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಹಾಗೂ ನಿವೃತ್ತ ಯೋಧರು ಸುಬ್ಬಪುರ್ ಮಠ್, ಬಡ ಕುಟುಂಬದ ಕಣ್ಣೀರು ಒರೆಸುವ ಕಾರ್ಯ ಈ ಸಂಘಟನೆಯಿಂದ ನಡೆಯುತ್ತಿದೆ. ತಾಲೂಕಿನಲ್ಲಿ ಹತ್ತು ಹಲವು ಕೆಲಸ ಕಾರ್ಯಗಳನ್ನು ಮಾಡುವ ಮೂಲಕ ಜನ ಮೆಚ್ಚುಗೆ ಪತ್ರಾರಾಗಿದ್ದೀರಿ ಮುಂದೆಯೂ ನಿಮ್ಮ ಜೊತೆ ಸದಾ ನನ್ನ ಸಹಕಾರ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ವೇದಿಕೆಯಲ್ಲಿ ರಾಯಲ್ ಟೈಗರ್ಸ್ ತಂಡದ ಪ್ರಮುಖರು ಶಿವ ಕುಮಾರ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸಭಾ ಅಧ್ಯಕ್ಷತೆಯನ್ನು ಸಂಘಟನೆಯ ಗೌರವ ಅಧ್ಯಕ್ಷ ಶಿವಪ್ರಸಾದ್ ಅಜಿಲರು ವಹಿಸಿದರು. ಅಳದಂಗಡಿ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ ಜೆ., ಎನ್. ಎಮ್. ತುಳುಪುಳೆ ಸಂಘಟನೆ ಪ್ರಮುಖರಾದ ಸುರೇಂದ್ರ ಆಚಾರ್ಯ ಸಿಲಿಕಾನ್ ಮೋಟಾರ್ಸ್ ಬೆಂಗಳೂರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಎರಡು ಅಶಕ್ತ ಕುಟುಂಬಗಳಿಗೆ ತಲಾ 10,000 ರೂಗಳ ಚೆಕ್ಕನ್ನು ಹಸ್ತಾಂತರಿಸಲಾಯಿತು. ಮತ್ತು ಶ್ರೀ ಗುರು ಚೈತನ್ಯ ಸೇವಾಶ್ರಮಕ್ಕೆ 60 ಕೆ.ಜಿ ಅಕ್ಕಿ ವಿತರಿಸಲಾಯಿತು. ಇದೇ ಕಾರ್ಯಕ್ರಮದ ವೇದಿಕೆಯಲ್ಲಿ ಕರಂಬಾರು ಗ್ರಾಮದ ಪ್ರಗತಿಪರ ಕೃಷಿಕ ಶಿವಾನಂದ ಹೆಗ್ಡೆ ಪರ್ಲಾಂಡ ದೇಹದಾನ ನೊಂದಣಿಗೆ ಸಹಿ ಹಾಕುವ ಮುಕಾಂತರ ಸಮಾಜಕ್ಕೆ ಮಾದರಿಯಾದರು.

ಸಂಘಟನೆಯ ಅಧ್ಯಕ್ಷ ದೇವದಾಸ್ ಸಾಲ್ಯಾನ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಹರೀಶ್ ಕಲ್ಲಾಜೆ ಕಾರ್ಯಕ್ರಮ ನಿರೂಪಿಸಿದರು. ಸಾನ್ವಿ ಕಡಂಬು ಪ್ರಾಥನೆ ನೆರವೇರಿಸಿದರು. ಸ್ನೇಹ ಕಟ್ಟೆ ಧನ್ಯವಾದ ನೀಡಿದರು.

Exit mobile version