Site icon Suddi Belthangady

ಮಹಾಮಂಡಲೇಶ್ವರ ಪಟ್ಟಾಭಿಶಿಕ್ತರಾಗಿ ಪುರಪ್ರವೇಶಮಾಡಿದ ಸದ್ಗುರು ಶ್ರೀ ಬ್ರಹ್ಮಾನಂದ ಶ್ರೀಗಳಿಗೆ ಉಜಿರೆ, ಕನ್ಯಾಡಿಯಲ್ಲಿ ಭವ್ಯ ಸ್ವಾಗತ

ಉಜಿರೆ: ಪ್ರಯಾಗ್‌ರಾಜ್‌ ನಲ್ಲಿ ನಡೆದ ಮಹಾ ಕುಂಭಮೇಳದಲ್ಲಿ ಉತ್ತರ ಭಾರತದ ನಾಗಾಸಾಧು ಸನ್ಯಾಸಿ ಪರಂಪರೆಯಲ್ಲಿ ಅತ್ಯುನ್ನತ ಹುದ್ದೆಯಾದ 1008 ಮಹಾಮಂಡಲೇಶ್ವರ ಪದವಿಯ ಪಟ್ಟಾಭಿಷೇಕವು ಜುನಾ ಅಖಾಡದ ಮೂಲಕ ನೆರವೇರಿಸಿದ ನಿತ್ಯಾನಂದ ನಗರದ ಶ್ರೀರಾಮ ಕ್ಷೇತ್ರದ ಪೀಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಫೆ 2ರಂದು ಶ್ರೀರಾಮಕ್ಷೇತ್ರಕ್ಕೆ ಆಗಮಿಸುವ ವೇಳೆ ಉಜಿರೆಯಲ್ಲಿ ಮತ್ತು ಕನ್ಯಾಡಿಯಲ್ಲಿ ಸಾರ್ವಜನಿಕರು ಶಿಷ್ಯವೃಂದ ಭವ್ಯ ಸ್ವಾಗತ ಕೋರುವ ಜೊತೆಗೆ ಪಟಾಕಿ ಸಿಡಿಸಿ ಸಂಭ್ರಮಾಚರಿಸಲಾಯಿತು.

ಸ್ವಾಮಿಜಿಯವರನ್ನು ಉಜಿರೆ ಬಸ್ ನಿಲ್ದಾಣದಲ್ಲಿ ಮತ್ತು ಕನ್ಯಾಡಿ ಶಾಲಾ ವಠಾರದಿಂದ ಶ್ರೀ ರಾಮ ಕ್ಷೇತ್ರಕ್ಕೆ ಭವ್ಯ ಮೆರವಣಿಗೆ, ಪೂರ್ಣ ಕುಂಭ ಮೆರವಣಿಗೆಯಲ್ಲಿ ಬರಮಾಡಿಕೊಂಡು ಕ್ಷೇತ್ರದ ನಿತ್ಯಾನಂದ ಸ್ವಾಮಿ, ಶ್ರೀ ರಾಮ ದೇವರ ಸನ್ನಿಧಿ, ಆತ್ಮಾನಂದ ಸರಸ್ವತಿ ಸ್ವಾಮೀಜಿ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ ಬಳಿಕ ಸ್ವಾಮೀಜಿ ಆಶೀರ್ವಚನ ನೀಡಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಉಜಿರೆ ಗ್ರಾ.ಪಂ. ಅಧ್ಯಕ್ಷೆ ಉಷಾ ಕಾರಂತ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಯಂತ ಕೋಟ್ಯಾನ್, ಬಿಜೆಪಿ ಮಂಡಲ ಅಧ್ಯಕ್ಷ ಶ್ರೀನಿವಾಸ್ ರಾವ್, ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ, ಜಿ.ಪಂ. ಮಾಜಿ ಸದಸ್ಯ ಶೈಲೇಶ್ ಕುರ್ತೋಡಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸೀತರಾಮ ಬೆಳಾಲು, ಸಂತೋಷ್ ಕಾಪಿನಡ್ಕ, ರಾಜೇಶ್ ಮೂಡುಕೋಡಿ, ಅಭಿನಂದನ್ ಹರೀಶ್ ಕುಮಾರ್, ಎಸ್.ಸಿ. ಮೋರ್ಚಾ ಜಿಲ್ಲಾಧ್ಯಕ್ಷ ಚೆನ್ನಕೇಶವ ಅರಸಮಜಲು, ಕ್ಷೇತ್ರದ ಟ್ರಸ್ಟಿಗಳಾದ ತುಕಾರಾಮ್ ಸಾಲ್ಯಾನ್, ಕೃಷ್ಣಪ್ಪ ಗುಡಿಗಾರ್, ರವೀಂದ್ರ ಪೂಜಾರಿ ಆರ್ಲ, ಉಜಿರೆ ವರ್ತಕರ ಸಂಘದ ಅಧ್ಯಕ್ಷ ಅರವಿಂದ ಕಾರಂತ್, ಪ್ರಕಾಶ್ ಚಾರ್ಮಾಡಿ, ಸದಾನಂದ ಪೂಜಾರಿ ಉಂಗಿಲಬೈಲು, ವೇಣೂರು ಸಹಕಾರ ಸಂಘದ ಅಧ್ಯಕ್ಷ ಸುಂದರ ಹೆಗ್ಡೆ, ಮೋಹನ್ ಶೆಟ್ಟಿಗಾರ್ ಉಜಿರೆ, ಧರ್ಮಸ್ಥಳ ಸಹಕಾರ ಸಂಘದ ಅಧ್ಯಕ್ಷ ಪ್ರೀತಂ ಧರ್ಮಸ್ಥಳ, ಉಪಾಧ್ಯಕ್ಷ ರಾಜೇಂದ್ರ ಜೈನ್, ತಾ.ಪಂ. ಮಾಜಿ ಸದಸ್ಯ ಸುಧೀರ್ ಆರ್.ಸುವರ್ಣ, ಕೇಶವ ಭಟ್ ಅತ್ತಾಜೆ, ವಿನೀತ್ ಕೋಟ್ಯಾನ್ , ಪೂರ್ಣಿಮಾ ಮುಂಡಾಜೆ, ಪದ್ಮನಾಭಾ ಶೆಟ್ಟಿಗಾರ್ ಉಜಿರೆ, ಭರತ್ ಕುಮಾರ್ ಉಜಿರೆ, ರಾಮಚಂದ್ರ ಶೆಟ್ಟಿ ಉಜಿರೆ, ಪುಷ್ಪಾವತಿ ಆರ್. ಶೆಟ್ಟಿ, ಚಿದಾನಂದ ಇಡ್ಯ, ಹುಕುಂ ರಾಮ್ ಪಾಟೀಲ್, ಲೋಕೇಶ್ ಶೆಟ್ಟಿ ಧರ್ಮಸ್ಥಳ, ಡಿ. ಪ್ರಭಾಕರ್ ಪೂಜಾರಿ, ಬಿ ಎಸ್ ಎನ್ ಎಲ್ ನಿವೃತ್ತ ಎಸ್ ಡಿ ಇ ಅಣ್ಣಿ ಪೂಜಾರಿ, ಉಪನ್ಯಾಸಕ ಕೇಶವ ಗೇರುಕಟ್ಟೆ, ಯಕ್ಷಗಾನ ಅಕಾಡೆಮಿ ಸದಸ್ಯ ದಯಾನಂದ ಪಿ. ಬೆಳಾಲು, ಗಂಗಾಧರ ಸಾಲಿಯಾನ್ ಬೆಳಾಲು, ಬಾಲಕೃಷ್ಣ ಗೌಡ ಮುಂಡ್ರೋಟ್ಟು, ಅಜಿತ್ ಕನ್ಯಾಡಿ, ವಿನೋದಿನಿ ರಾಮಪ್ಪ, ಸುಜಾತಾ ಅಣ್ಣಿ ಪೂಜಾರಿ, ಸುನೀಲ್ ಕನ್ಯಾಡಿ, ವಿನಾಯಕ ರಾವ್ ಕನ್ಯಾಡಿ, ಚಂದನ್ ಗುಡಿಗಾರ್, ಮಹೇಶ್ ಜೇಂಕಾರ್, ಕೃಷ್ಣಪ್ಪ ಪೂಜಾರಿ ನಿಡಿಗಲ್, ಮೊದಲಾದವರು ರಥ ಬೀದಿ ವ್ಯಾಪಾರಸ್ಥರು, ಶಿಷ್ಯ ವೃಂದದವರು ಉಪಸ್ಥಿತರಿದ್ದರು.

Exit mobile version