Site icon Suddi Belthangady

ಬೆಳ್ತಂಗಡಿ: ವಾಣಿ ಶಿಕ್ಷಣ ಸಂಸ್ಥೆಯಲ್ಲಿ ಬೃಹತ್ ರಕ್ತದಾನ ಶಿಬಿರ

ಬೆಳ್ತಂಗಡಿ: ಯುವ ವೇದಿಕೆ ಮತ್ತು ಮಹಿಳಾ ವೇದಿಕೆ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಬೆಳ್ತಂಗಡಿ ಮತ್ತು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ದಕ್ಷಿಣ ಕನ್ನಡ ಜಿಲ್ಲೆ ಇದರ ನೇತೃತ್ವದಲ್ಲಿ
ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಹಳೆಕೋಟೆ ಬೆಳ್ತಂಗಡಿ, ವಾಣಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಬೆಳ್ತಂಗಡಿ ಹಾಗೂ ಸ್ಪಂದನ ಸೇವಾ ಸಂಘ ಬೆಳ್ತಂಗಡಿ ಇವರ ಸಹಭಾಗಿತ್ವದಲ್ಲಿ ಬೃಹತ್ ರಕ್ತದಾನ ಶಿಬಿರ ವಾಣಿ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ನೆರವೇರಿತು.

ಕಾರ್ಯಕ್ರಮವನ್ನು ಗೌಡರ ಯಾನೆ ಒಕ್ಕಲಿಗ ಸೇವಾ ಸಂಘ ಬೆಳ್ತಂಗಡಿ ಇದರ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ ದೀಪ ಪ್ರಜ್ವಲನೆ ಮಾಡುವ ಮೂಲಕ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಸ್ಪಂದನ ಸೇವಾ ಸಂಘದ ಸಂಚಾಲಕ ಮೋಹನ್ ಗೌಡ, ತಾಲೂಕು ಯುವ ವೇದಿಕೆ ಅಧ್ಯಕ್ಷ ಚಂದ್ರಕಾಂತ ನಿಡ್ಡಾಜೆ, ತಾಲೂಕು ಮಹಿಳಾ ವೇದಿಕೆ ಅಧ್ಯಕ್ಷೆ ಗೀತಾ ರಾಮಣ್ಣ ಗೌಡ ಮತ್ತು ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಸಂಚಾಲಕ ಪ್ರವೀಣ್ ಕುಮಾರ್ ಭಾಗವಹಿಸಿದ್ದರು.

ಕಾರ್ಯಕ್ರಮದ ಯಶಸ್ವಿಗೆ ಕಿರಣ್ ಚಂದ್ರ ಪುಷ್ಪಗಿರಿ ರಕ್ತದಾನ ಮಾಡಿದ್ದಲ್ಲದೆ ಆರ್ಥಿಕ ಸಹಕಾರ ನೀಡಿ ಪ್ರೋತ್ಸಾಹಿಸಿದರು.
ರಕ್ತದಾನ ಶಿಬಿರದಲ್ಲಿ ಒಟ್ಟು 72 ದಾನಿಗಳು ರಕ್ತ ನೀಡಿ ಸಹಕರಿಸಿದರು. ರಕ್ತದಾನಿಗಳಿಗೆ ಸಸ್ಯದಾನ ಮಾಡಲಾಯಿತು. ಮಲವಂತಿಗೆ ಗ್ರಾಮದ ಜಾಲು ನಿವಾಸಿ ಕೃಷ್ಣ ಗೌಡ ಇವರಿಗೆ ಗಾಲಿ ಕುರ್ಚಿ ವಿತರಣೆ ಮಾಡಲಾಯಿತು ಹಾಗೂ ಸ್ಪಂದನ ಸೇವಾ ಸಂಘದಿಂದ ಆರ್ಥಿಕವಾಗಿ ಹಿಂದುಳಿದ 6 ಕುಟುಂಬಗಳಿಗೆ ತಲಾ ರೂ. 10,000/-ದ ಚೆಕ್ ವಿತರಿಸಲಾಯಿತು. ತಾಲೂಕು ಮಟ್ಟದ ಕೆಸರ್ ಕಂಡೊಡು ಗೌಜಿ ಗಮ್ಮತ್ ಕ್ರೀಡಾಕೂಟದಲ್ಲಿ ಉಳಿತಾಯವಾದ ಮೊತ್ತದಲ್ಲಿ ರೂಪಾಯಿ 50 ಸಾವಿರದ ಚೆಕ್ಕನ್ನು ಸ್ಪಂದನ ಸೇವಾ ಸಂಘಕ್ಕೆ ಹಸ್ತಾಂತರಿಸಲಾಯಿತು.

ತಾಲೂಕು ಸಮಿತಿಯ ನಿರ್ದೇಶಕರುಗಳಾದ ಜಯಾನಂದ ಗೌಡ ಬೆಳ್ತಂಗಡಿ, ಮಾಧವ ಗೌಡ ಬೆಳ್ತಂಗಡಿ, ದಿನೇಶ್ ಗೌಡ ಕೊಯ್ಯೂರು, ಗೌರವಾಧ್ಯಕ್ಷರಾಗಿರುವ ವಾಣಿ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಪದ್ಮ ಗೌಡ ಬೆಳಾಲು, ನಿರ್ದೇಶಕರಾದ ಪುರಂದರ ಮೊಗ್ರು, ವಾಣಿ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಪ್ರಸಾದ್ ಕಡ್ತಿಯಾರ್, ಮಹಿಳಾ ವೇದಿಕೆಯ ಜೊತೆ ಕಾರ್ಯದರ್ಶಿ ಮೀನಾಕ್ಷಿ ಮಹಾಬಲ ಗೌಡ, ಪೂರ್ಣಿಮಾ ಜಂಕಿನಡ್ಕ, ಯುವ ವೇದಿಕೆಯ ಉಪಾಧ್ಯಕ್ಷರುಗಳಾದ ಪ್ರಶಾಂತ್ ಅಂತರ ಕಡಿರುದ್ಯಾವರ, ನಿತಿನ್ ಕನ್ಯಾಡಿ, ಸಂಘಟನಾ ಕಾರ್ಯದರ್ಶಿ ಪ್ರಮೋದ್ ದಿಡುಪೆ, ಕ್ರೀಡಾ ಕಾರ್ಯದರ್ಶಿ ಗಿರೀಶ್ ನಿಡ್ಲೆ, ಹೇಮಂತ್ ಕಳಿಯ, ಪ್ರದೀಪ್ ನಾಗಾಜೆ, ಭರತ್ ಪುದುವೆಟ್ಟು, ತೀಕ್ಷಿತ್ ದಿಡುಪೆ, ಪ್ರಸಾದ್ ಅಡಿಮಾರು ಚಾರ್ಮಾಡಿ, ಕಿಶಾನ್ ಸವಣಾಲು, ವಾಣಿ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯ ಸೋಮಂತ್ತಡ್ಕ ಶಾಖಾ ವ್ಯವಸ್ಥಾಪಕ ಉಮೇಶ್ ಮೈರ್ನೋಡಿ, ಕಲ್ಲೇರಿ ಶಾಖಾ ವ್ಯವಸ್ಥಾಪಕ ನಿತೇಶ್ ಬೆಳ್ತಂಗಡಿ, ಸಿಬ್ಬಂದಿಗಳಾದ ಚರಣ್ ಬೈಪಾಡಿ, ಶೋಧನ್ ಬೈಪಾಡಿ, ಯುವ ವೇದಿಕೆ ಮತ್ತು ಮಹಿಳಾ ವೇದಿಕೆಯ ಸದಸ್ಯರು ಉಪಸ್ಥಿತರಿದ್ದರು.
ತಾಲೂಕು ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ಸುರೇಶ್ ಕೌಡಂಗೆ ವಂದಿಸಿದರು. ತಾಲೂಕು ಯುವ ವೇದಿಕೆಯ ಕಾನೂನು ಸಲಹೆಗಾರ ನವೀನ್ ಬಿ.ಕೆ. ಕಾರ್ಯಕ್ರಮ ನಿರೂಪಿಸಿದರು.

Exit mobile version