Site icon Suddi Belthangady

ಆದಾಯ ತೆರಿಗೆಯಲ್ಲಿ ಭಾರೀ ವಿನಾಯಿತಿ ನೀಡುವ ಮೂಲಕ ಕೋಟ್ಯಾಂತರ ನಾಗರಿಕರ ಆಶೋತ್ತರಗಳನ್ನು ಈಡೇರಿಸಿದೆ- ಉದ್ಯಮಿ ಕಿರಣ್ ಚಂದ್ರ ಪುಷ್ಪಗಿರಿ

ಬೆಳ್ತಂಗಡಿ: ಫೆ. 1 ರಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ 2025-26ನೇ ಸಾಲಿನ ಮುಂಗಡ ಪತ್ರ ನರೇಂದ್ರ ಮೋದಿ ನೇತೃತ್ವದ ಬಜೆಟ್ ನಲ್ಲಿ ಆದಾಯ ತೆರಿಗೆಯಲ್ಲಿ ಭಾರೀ ವಿನಾಯಿತಿ ನೀಡುವ ಮೂಲಕ ಕೋಟ್ಯಾಂತರ ನಾಗರಿಕರ ಆಶೋತ್ತರಗಳನ್ನು ಈಡೇರಿಸಿದೇ ಎಂದು ಉದ್ಯಮಿ ಕಿರಣ್ ಚಂದ್ರ ಪುಷ್ಪಗಿರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶಿಕ್ಷಣ ರಂಗದಲ್ಲಿ ಮಹತ್ತರ ಬದಲಾವಣೆ, ಔಷಧಿಗಳ ಆಮದು ಸುಂಕ ರದ್ದು ಬಡ ಜನತೆಗೆ ಉತ್ತಮ ಆರೋಗ್ಯ ಸೇವೆ, ಮೊಬೈಲ್ ಎಲ್. ಇ. ಡಿ ಸೇವೆಗಳ ಅಗ್ಗವಾಗಿದ್ದು, ಆದಾಯ ತೆರಿಗೆದಾರರಿಗೆ ಆದಾಯದ ಮಿತಿಯನ್ನು12 ಲಕ್ಷಕ್ಕೆ ಏರಿಸಿರುವುದು ಸ್ವಾಗತಾರ್ಹವಾಗಿದೆ ಎಂದರು.

Exit mobile version