Site icon Suddi Belthangady

ಬಾರ್ಯ ಶ್ರೀ ಮಹಾವಿಷ್ಣು ದೇವಸ್ಥಾನ – ಚಪ್ಪರ ಮುಹೂರ್ತ

ಬಾರ್ಯ: ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಫೆ. 7 ರಂದು ಜರಗಲಿರುವ 5ನೇ ವಾರ್ಷಿಕ ಪ್ರತಿಷ್ಠಾ ದಿನೋತ್ಸವದ ಅಂಗವಾಗಿ ಗೊನೆ ಮುಹೂರ್ಥ ಮತ್ತು ಚಪ್ಪರ ಮುಹೂರ್ಥವು ಆಡಳಿತ ಸೇವಾ ಟ್ರಸ್ಟಿನ ಅಧ್ಯಕ್ಷ ಭಾಸ್ಕರ ಬಾರ್ಯ ಮತ್ತು ಅರ್ಚಕರಾದ ಗುರುಪ್ರಸಾದ ನೂರಿತ್ತಾಯ ವೈದಿಕ ವಿಧಿ ವಿಧಾನಗಳೊಂದಿಗೆ ಜ. 31 ರಂದು ನೆರವೇರಿಸಿಕೊಟ್ಟರು.

ಪವಿತ್ರ ಪಾಣಿ ಸೂರ್ಯನಾರಾಯಣ ಕುದ್ದಣ್ಣಾಯ ಟ್ರಸ್ಟಿ ಮತ್ತು ಪದಾಧಿಕಾರಿಗಳಾದ ಪ್ರಶಾಂತ್ ಪೈ, ಮನೋಹರ ಶೆಟ್ಟಿ, ನಾರಾಯಣಗೌಡ, ರಾಮಣ್ಣಗೌಡ, ಚೇತನ್ ಅದಮ್ಮ, ಬಾಲಕೃಷ್ಣ ಶೆಟ್ಟಿ, ವಿಶ್ವನಾಥ ಗೌಡ, ವಿದ್ಯಾ ಪ್ರಭಾಕರ್, ಪ್ರೇಮ ನೂರಿತ್ತಾಯ, ಕೃಷ್ಣಪ್ಪ ಪೂಜಾರಿ, ದಯಾನಂದ ಆಲಡ್ಕ, ಶಿವರಾಮ ನಾಯ್ಕ್ ಉಪಸ್ಥಿತರಿದ್ದರು.

Exit mobile version