ಧರ್ಮಸ್ಥಳ: ಎಸ್. ಡಿ. ಎಮ್ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಪರೀಕ್ಷೆಗಳ ತಯಾರಿ, ಸಮಯ ನಿರ್ವಹಣೆ ಮತ್ತು ಅಧ್ಯಯನದ ಉತ್ತಮ ವಿಧಾನಗಳ ಬಗ್ಗೆ ಕಾರ್ಯಾಗಾರವನ್ನು ಆಯೋಜಿಸಲಾಯಿತು. ಈ ಕಾರ್ಯಾಗಾರದಲ್ಲಿ ಎಸ್. ಡಿ. ಎಮ್ ರೆಸಿಡೆನ್ಷಿಯಲ್ ಪಿ. ಯು. ಕಾಲೇಜಿನ ಪ್ರಾಂಶುಪಾಲ ಸುನಿಲ್ ಪಂಡಿತ್ ಮುಖ್ಯ ಉಪನ್ಯಾಸವನ್ನು ನೀಡಿದರು.
ಅವರು ಪರೀಕ್ಷೆಗಳಿಗೆ ಸಿದ್ಧತೆ ನಡೆಸಲು ವಿವಿಧ ಅಧ್ಯಯನ ತಂತ್ರಗಳು, ಸಮಯ ನಿರ್ವಹಣೆ ಹಾಗೂ ಅಧ್ಯಯನದಲ್ಲಿ ಸಾಮರ್ಥ್ಯವನ್ನು ಹೇಗೆ ಬೆಳಸಬಹುದು ಎಂಬುದನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.
ಕಾರ್ಯಾಗಾರದಲ್ಲಿ ಗುಂಪು ಚರ್ಚೆಗಳು ಮತ್ತು ಚಟುವಟಿಕೆಗಳನ್ನು ಆಯೋಜಿಸಿ, ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು. ಮತ್ತು ಅವರಲ್ಲಿ ಸಮಯದ ಪರಿಣಾಮಕಾರಿಯಾಗಿ ಉಪಯೋಗಿಸುವ ಚಿಂತನೆಗಳನ್ನು ಉತ್ತೇಜಿಸಿದರು. ಈ ಕಾರ್ಯಗಾರವು ವಿದ್ಯಾರ್ಥಿಗಳಲ್ಲಿ ನವಚೇತನ ತಂದಿತು. ಅವರು ತಮ್ಮ ಅಧ್ಯಯನ ವಿಧಾನಗಳನ್ನು ಹತ್ತಿರದಿಂದ ಪರಿಶೀಲಿಸಿ, ತಕ್ಷಣದ ಸುಧಾರಣೆಗಳನ್ನು ಹೇಗೆ ಅಳವಡಿಸಿಕೊಳ್ಳಬಹುದೆಂದು ಅರಿತುಕೊಳ್ಳಲು ಪ್ರೇರಣೆಯನ್ನು ನೀಡಿತು.