Site icon Suddi Belthangady

ಎಕ್ಸೆಲ್ ಪ. ಪೂ. ಕಾಲೇಜು ವತಿಯಿಂದ ಗುರುವಾಯನಕೆರೆ ಸ. ಹಿ. ಪ್ರಾಥಮಿಕ ಶಾಲೆಗೆ ಪೀಠೋಪಕರಣಗಳ ಹಸ್ತಾಂತರ

ಬೆಳ್ತಂಗಡಿ: ಗುರುವಾಯನಕೆರೆ ದ. ಕ. ಜಿ. ಪ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮೂಲಸೌಕರ್ಯ ಅಗತ್ಯತೆಗಳನ್ನು ಪೂರೈಸುವ ಸಲುವಾಗಿ ಲಕ್ಷಕ್ಕೂ ಅಧಿಕ ಮೊತ್ತದ ಪೀಠೋಪಕರಣಗಳನ್ನು ಎಕ್ಸೆಲ್ ಕಾಲೇಜು ವತಿಯಿಂದ ನೀಡಲಾಯಿತು.

ಎಕ್ಸೆಲ್ ವಿದ್ಯಾ ಸಂಸ್ಥೆಗಳ ಸಂಸ್ಥಾಪಕರು ಹಾಗೂ ಆಡಳಿತ ಮಂಡಳಿಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಭಾಗವಹಿಸಿ ಮಕ್ಕಳಿಗೆ ಶುಭಹಾರೈಸಲಾಯಿತು.

ಶಾಲೆಯ ವತಿಯಿಂದ ಸುಮಂತ್ ಕುಮಾರ್ ಜೈನ್ ರವರನ್ನು ಗೌರವಿಸಲಾಯಿತು. ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಅಬ್ದುಲ್ ಲತೀಫ್, ಸದಸ್ಯರು ಹಾಗೂ ಶಾಲಾ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರು, ವಿದ್ಯಾರ್ಥಿಗಳ ಹೆತ್ತವರು ಪಾಲ್ಗೊಂಡಿದ್ದರು.

Exit mobile version