Site icon Suddi Belthangady

ಬೆಳ್ತಂಗಡಿ: ಅಪ್ರಾಪ್ತ ಬಾಲಕಿಯ ಅತ್ಯಾಚಾರ & ಗರ್ಭಿಣಿ ಪ್ರಕರಣ – ಆರೋಪಿ ಕೇಶವ ಪೂಜಾರಿಗೆ ಶಿಕ್ಷೆ ಪ್ರಕಟ


ಬೆಳ್ತಂಗಡಿ : ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಬೆದರಿಕೆ ಹಾಕಿ ಅತ್ಯಾಚಾರ ಮಾಡಿ ಗರ್ಭಿಣಿಯಾಗಲು ಕಾರಣವಾಗಿದ್ದ ಆರೋಪಿ ಧರ್ಮಸ್ಥಳ ಗ್ರಾಮದ ನಾರ್ಯ ನಿವಾಸಿ ಕೇಶವ ಪೂಜಾರಿ(43)ಗೆ ಮಂಗಳೂರು ಪೋಕೋ ನ್ಯಾಯಾಲಯ 20 ವರ್ಷ ಶಿಕ್ಷೆ ಹಾಗೂ ದಂಡ ವಿಧಿಸಿ ಜ. 28 ರಂದು ಶಿಕ್ಷೆ ಪ್ರಕಟ ಮಾಡಿದೆ.

ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ 11-11-2023 ರಂದು ಪೋಕ್ಸೋ ಪ್ರಕರಣ ದಾಖಲಾಗಿತ್ತು. ಜ. 28 ರಂದು Cr.106/2023 ಆರೋಪಿ ಕೇಶವ ಪೂಜಾರಿ ಎಂಬಾತನಿಗೆ u/s 6 pocso 376(2)(n). 376(3) ನಲ್ಲಿ 20 ವರ್ಷ ಕಾರಾವಾಸ 50 ಸಾವಿರ ರೂಪಾಯಿ ದಂಡ ತಪ್ಪಿದ್ದಲ್ಲಿ 4 ತಿಂಗಳ ಸಾದ ಕಾರಾವಾಸ ಶಿಕ್ಷೆ ಹಾಗೂ u/s 506 ನಲ್ಲಿ 3 ತಿಂಗಳ ಅವಧಿ ಕಾರಾಗೃಹ ಶಿಕ್ಷೆ 5 ಸಾವಿರ ರೂಪಾಯಿ ದಂಡ ತಪ್ಪಿದ್ದಲ್ಲಿ 15 ದಿನ ಕಾರಾವಾಸ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.

Exit mobile version