ಉಜಿರೆ: ಶ್ರೀ ಧ. ಮಂ. ವಸತಿ ಪದವಿ ಪೂರ್ವ ಕಾಲೇಜು 76ನೇ ವರ್ಷದ ಗಣರಾಜ್ಯ ದಿನದ ಆಚರಣೆಯನ್ನು ಭಾರತೀಯ ನೌಕ ಪಡೆಯ ನಿವೃತ್ತ ಅಧಿಕಾರಿ ಎಸ್. ಕೃಷ್ಣ ಭಟ್ ಧ್ವಜಾರೋಹಣದ ಮೂಲಕ ನೆರವೇರಿಸಿದರು.
ಸಂವಿಧಾನದ ಅಗತ್ಯತೆ ಹಾಗೂ ಅದರ ಪಾಲನೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ದೇಶ ಪ್ರೇಮದ ಭಾವ ನಿತ್ಯ ಜಾಗೃತಗೊಳ್ಳಲಿ, ಸದೃಢ ದೇಹ ಮನಸನ್ನು ನಮ್ಮದಾಗಿಸಿ ದೇಶ ಸೇವೆಯಲ್ಲಿ ತೊಡಗಿಸಿ ಸಾರ್ಥಕ್ಯಗೊಳಿಸಿ, ಶಿಕ್ಷಣದ ಮೂಲಕ ಉನ್ನತ ಯೋಚನೆ – ಯೋಜನೆಯ ಯುವ ಜನತೆಯಲ್ಲಿ ಹೊರ ಹೊಮ್ಮಬೇಕು.
ಸಂವಿಧಾನಕ್ಕೆ ಗೌರವ ನೀಡಿ ಪಾಲಿಸಬೇಕು ಎಂದರು. ಕಾಲೇಜಿನ ಪ್ರಾಂಶುಪಾಲ ಸುನಿಲ್ ಪಂಡಿತ್, ಉಪ ಪ್ರಾಂಶುಪಾಲ ಮನೀಶ್ ಕುಮಾರ್ ಹಾಗೂ ಕಾಲೇಜಿನ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.