Site icon Suddi Belthangady

ಅರಸಿನಮಕ್ಕಿ: ಪ್ರೌಢಶಾಲೆಯಲ್ಲಿ ಗಣರಾಜ್ಯೋತ್ಸವ – ನಿವೃತ್ತ ಯೋಧ ದೀಪಕಾನಂದ, ಎಸ್ ಕೆ ಡಿ ಆರ್ ಡಿ ಪಿ ಮೈಸೂರ್ ವಿಭಾಗ ಪ್ರಾದೇಶಿಕ ನಿರ್ದೇಶಕ ಜಯರಾಮ್ ನೆಲ್ಲಿತ್ತಾಯ ರಿಗೆ ಸನ್ಮಾನ

ಅರಸಿನಮಕ್ಕಿ: ಗಣರಾಜ್ಯೋತ್ಸವ ವಿಶೇಷ ದಿನದಂದು ಪ್ರೌಢಶಾಲೆಯಲ್ಲಿ ದ್ವಜಾರೋಹಣ ನೆರವೇರಿಸಿ ಶಾಲಾ ಮಕ್ಕಳಿಗೆ ದೇಶಭಕ್ತಿ ಗೀತೆ, ದೇಶದ ಕುರಿತಾದ ಭಾಷಣ ಸ್ಪರ್ಧೆ ಹಾಗೂ ವಿವಿಧ ಚಟುವಟಿಕೆಗಳನ್ನು ಮತ್ತು ನಿವೃತ್ತ ಯೋಧ ಅರಣ್ಯ ಇಲಾಖೆಯ ಪಂಜ ವಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ದೀಪಕಾನಂದ ಮತ್ತು ಎಸ್ ಕೆ ಡಿ ಆರ್ ಡಿ ಪಿ ಯ ಮೈಸೂರ್ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಜಯರಾಮ್ ನೆಲ್ಲಿತ್ತಾಯ ರವರಿಗೆ ಸನ್ಮಾನ ಏರ್ಪಡಿಸಿದ್ದರು.

ಪ್ರೌಢ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಗಣೇಶ್ ಕುಲಾಲ್
ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಯಾಗಿ ಎಸ್ ಕೆ ಡಿ ಆರ್ ಡಿ ಪಿ ಮೈಸೂರ್ ವಿಭಾಗದ ಪ್ರಾದೇಶಿಕ ನಿರ್ದೇಶಕ ಜಯರಾಮ್ ನೆಲ್ಲಿತ್ತಾಯ, ಪಂಚಾಯತ್ ಉಪಾಧ್ಯಕ್ಷ ಸುಧೀರ್ ಕುಮಾರ್ ಎಂ ಎಸ್, ಕಾಲೇಜ್ ಪ್ರಿನ್ಸಿಪಾಲ್ ರಾಮಯ್ಯ, ಪ್ರೌಢಶಾಲೆ ಮುಖ್ಯ ಶಿಕ್ಷಕಿ ಮಂಜುಳಾ ಉಪಸ್ಥಿತರಿದ್ದರು.

ಶಿಕ್ಷಕಿ ನವ್ಯ ಸ್ವಾಗತಿಸಿ, ಶಿಕ್ಷಕಿ ಚೇತನ ಕಾರ್ಯಕ್ರಮ ನಿರೂಪಿಸಿ, ಹಿಂದಿ ಶಿಕ್ಷಕಿ ಧನ್ಯಶ್ರೀ ಧನ್ಯವಾದವಿತ್ತರು.

Exit mobile version