Site icon Suddi Belthangady

ಜೂನಿಯರ್ ಗ್ರೇಡ್ ಡ್ರಾಯಿಂಗ್ ಪರೀಕ್ಷೆ ಹಾಗೂ ಭರತನಾಟ್ಯ ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಕೊಕ್ಕಡದ ಅದಿತಿ ಕೆ. ತೇರ್ಗಡೆ

ಬೆಳ್ತಂಗಡಿ: ಇತ್ತೀಚೆಗೆ ನಡೆದ ಜೂನಿಯರ್ ಗ್ರೇಡ್ ಡ್ರಾಯಿಂಗ್ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಅಂಕ ಪಡೆದು ಉತ್ತಿರ್ಣಳಾದ ಅದಿತಿ ಕೆ. ಚಿತ್ರಕಲಾ ಶಿಕ್ಷಕ ಪ್ರಸನ್ನ ಐವರ್ನಾಡು ಸುಳ್ಯ ಇವರ ಶಿಷ್ಯೆಯಾಗಿದ್ದಾರೆ .

ಹಾಗೆಯೇ ಭರತನಾಟ್ಯ ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯೊಂದಿಗೆ ಉತ್ತೀರ್ಣಳಾದ ಈಕೆ ಪುತ್ತೂರು ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಗುರುಗಳಾದ ವಿದ್ವಾನ್ ದೀಪಕ್ ಕುಮಾರ್, ವಿದುಷಿ ಪ್ರೀತಿಕಲಾ ಹಾಗೂ ವಿದ್ವಾನ್ ಗಿರೀಶ್ ಕುಮಾರ್ ರವರ ಶಿಷ್ಯೆಯಾಗಿದ್ದು, ಪ್ರಸ್ತುತ ಈಕೆ ಸೈಂಟ್ ಫ್ರಾನ್ಸಿಸ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಕೊಕ್ಕಡದಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಕೊಕ್ಕಡ ಗ್ರಾಮದ ಹಳ್ಳಿoಗೇರಿ ಶ್ರೀ ಕ್ಷೇ. ಧ. ಗ್ರಾ ಯೋಜನೆಯ ಮೇಲ್ವಿಚಾರಕ ದಿನೇಶ್ ಕೆ. ಹಾಗೂ ಬಜತ್ತೂರು ಶಾಲೆ ಶಿಕ್ಷಕಿ ಪವಿತ್ರಾರವರ ಪುತ್ರಿ.

Exit mobile version