ಅಳದಂಗಡಿ: ಟೀಮ್ ಅಭಯ ಹಸ್ತ ಚಾರಿಟೇಬಲ್ ಸ್ಪೋರ್ಡ್ಸ್ ಕ್ಲಬ್ ಬೆಳ್ತಂಗಡಿ ಇದರ ಸಾರಥ್ಯದಲ್ಲಿ ಜ. 25 ಮತ್ತು 26 ರಂದು ಅಳದಂಗಡಿ ಸತ್ಯದೇವತಾ ಮೈದಾನದಲ್ಲಿ 8 ನೇ ವರ್ಷದ ಕ್ರೀಡೋತ್ಸವ, ಪ್ರತಿಭಾ ಪುರಸ್ಕಾರ, ಸೇವಾ ಯೋಜನೆಗಳ ಹಸ್ತಾಂತರದ ಚಾಲನೆ, ಸಾಧಕರು ಹಾಗೂ ಕ್ರೀಡಾ ಪೋಷಕರಿಗೆ ಗೌರವಾರ್ಪಣೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಸಂಸ್ಥೆಯ ಪ್ರಧಾನ ಸಂಚಾಲಕ ಸಂದೀಪ್ ಎಸ್. ನಿರಲ್ಕೆ ತಿಳಿಸಿದ್ದಾರೆ.
ಸಮಾರಂಭದ ಉದ್ಘಾಟನೆಯನ್ನು ಅಳದಂಗಡಿ ಅರಮನೆಯ ಶಿವಪ್ರಸಾದ್ ಅಜಿಲ ಮಾಡಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್ ವಹಿಸಲಿದ್ದಾರೆ.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜಾ ವಹಿಸಲಿದ್ದಾರೆ.
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಸೇರಿದಂತೆ ವಿವಿಧ ಕ್ಷೇತ್ರಗಳ ಮುಂಚೂಣಿ ನಾಯಕರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಜ. 26 ರಂದು ಸಂಜೆ ಕಲ್ಲಡ್ಕ ವಿಠಲ್ ನಾಯಕ್ ತಂಡವರಿಂದ ಬಡಗಕಾರಂದುರು ಶಾಲಾ ವಠಾರದಲ್ಲಿ ಗೀತ ಸಾಹಿತ್ಯ ಸಂಭ್ರಮ ಅನ್ನೋ ಕಾರ್ಯಕ್ರಮ ನಡೆಯಲಿದೆ.
ರಾಜ್ಯ ಮಟ್ಟದಲ್ಲಿ ಹೆಸರನ್ನು ಪಡೆದಿರುವ ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿ ಸೇರಿದಂತೆ ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡಿರುವ ಪ್ರಮುಖ ಸಂಘಟನೆಗಳಿಗೆ ಗೌರವಾರ್ಪಣೆ ನಡೆಯಲಿದೆ. ಸಮಾಜ ಸೇವಕರಾಗಿ ಗುರುತಿಸಿಕೊಂಡು ಹತ್ತು ಹಲವು ಸೇವಾ ಯೋಜನೆಗಳನ್ನು ಬಡ ಜನರಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಸಂದೀಪ್ ನಿರಲ್ಕೆ ಯವರ ದೂರದರ್ಶಿತ್ವದ ಚಿಂತನೆಯಲ್ಲಿ ರೂಪುಗೊಂಡ ಸಂಸ್ಥೆಯಲ್ಲಿ ರಕ್ಷಿತ್ ಎ. ಬಿ. ಪ್ರಧಾನ ಕಾರ್ಯದರ್ಶಿಯಾಗಿ, ವಿಶ್ವನಾಥ ಕಾಶಿಪಟ್ಣ ಕೋಶಾಧಿಕಾರಿಯಾಗಿ, ಜಯಾನಂದ ಎ. ಕ್ರೀಡಾ ಸಂಯೋಜಕರಾಗಿ ದುಡಿಯುತ್ತಿದ್ದಾರೆ. ಕ್ಲಬ್ ನ ಎಲ್ಲಾ ಸದಸ್ಯರು ಕೈ ಜೋಡಿಸಿದ್ದಾರೆ.