Site icon Suddi Belthangady

ಪೆರೋಡಿತ್ತಾಯಕಟ್ಟೆ: ಗುಡ್ಡಕ್ಕೆ ಆಕಸ್ಮಿಕ ಬೆಂಕಿ – ಅರಣ್ಯ ಇಲಾಖೆಯಿಂದ ಬೆಂಕಿ ನಂದಿಸುವ ಕಾರ್ಯ

ಪೆರೋಡಿತ್ತಾಯಕಟ್ಟೆ: ಮಸೀದಿ ಬಳಿ ಟ್ರಾನ್ಸ್ ಫಾರ್ಮರ್ ನಿಂದ ಸಿಡಿದ ಕಿಡಿಗೆ ಜ. 24 ಮಧ್ಯಾಹ್ನ ಹುಲ್ಲಿಗೆ ಬೆಂಕಿ ಹತ್ತಿಕೊಂಡಿದ್ದು, ಆ ಸಮಯ ಅಲ್ಲಿ ಹಾದುಹೋಗುತ್ತಿದ್ದ ಅಳದಂಗಡಿ ವನ್ಯಜೀವಿ ಶಾಖೆ ಉಪವಲಯ ಅರಣ್ಯ ಅಧಿಕಾರಿ ಹರಿಪ್ರಸಾದ್ ಹಾಗೂ ಸ್ಥಳೀಯರಾದ ಕಾಸಿಂ, ನಿಜಾಮ್, ಯಾಸಿರ್, ಸವಾದ್, ಸುನಿಲ್, ಮಿಯಾಜ್ ಸೇರಿಕೊಂಡು ತಕ್ಷಣ ಬೆಂಕಿ ನಿಯಂತ್ರಣ ಮಾಡಿರುತ್ತಾರೆ.

ಲಗ್ತಿ ರಸ್ತೆ ಬದಿ ನೆಡುತೋಪು, ಖಾಸಗಿ ರಬ್ಬರ್ ತೋಟಗಳು ಹಾನಿಯಾಗುವುದರಿಂದ ಪಾರಾಗಿವೆ. ಬಳಿಕ ಅಳದಂಗಡಿ ಪ್ರಾದೇಶಿಕ ವಲಯ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದು ಸಿಬ್ಬಂದಿಗಳು ಮುಂದಿನ ಕ್ರಮ ಕೈಗೊಂಡಿರುತ್ತಾರೆ.

Exit mobile version