Site icon Suddi Belthangady

ಮರೋಡಿ: ರಸ್ತೆ ದುರಸ್ಥಿ

ಮರೋಡಿ : ಶ್ರೀ ದೈವ ಕೊಡಮಣಿತ್ತಾಯ ದೈವಸ್ಥಾನ ದೇರಾಜೆಬೆಟ್ಟ ಇದರ ಸಂಪರ್ಕ ರಸ್ತೆ ಕಳೆದ ಮಳೆಗಾಲದಲ್ಲಿ ಕುಸಿತವಾಗಿತ್ತು. ಮಾನ್ಯ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರೂ ಈವರೆಗೂ ರಸ್ತೆ ದುರಸ್ಥಿಯಾಗದ ಹಿನ್ನಲೆ ಕಳೆದ 6 ತಿಂಗಳಿನಿಂದ ಕ್ಷೇತ್ರಕ್ಕಾಗಮಿಸುವ ಭಕ್ತಾದಿಗಳಿಗೆ ಅನಾನುಕೂಲವಾಗಿತ್ತು.

ಈ ವೇಳೆ ಕ್ಷೇತ್ರದ ಭಕ್ತಾದಿಗಳು ತಮ್ಮ ಕೆಲಸ ಕಾರ್ಯ ಬದಿಗಿಟ್ಟು, ಕ್ಷೇತ್ರದ ಮೇಲಿನ ಅನನ್ಯ ಭಕ್ತಿಯಿಂದ ಸುಸಜ್ಜಿತ ಮರದ ಸೇತುವೆ ನಿರ್ಮಿಸಿ, ವಿಶೇಷ ಸೇವೆ ಗೈದಿದ್ದರು. ಆದರೆ ಈ ಬಾರಿ ನೇಮೋತ್ಸವಕ್ಕೆ ಹೆಚ್ಚಿನ ಭಕ್ತರು ಆಗಮಿಸುವ ಹಿನ್ನೆಲೆ ಕ್ಷೇತ್ರದ ಆಡಳಿತ ಸಮಿತಿ ವತಿಯಿಂದ ಕುಸಿದು ಬಿದ್ದ ಮೋರಿಯ ಭಾಗಕ್ಕೆ ತಾತ್ಕಾಲಿಕವಾಗಿ ಮಣ್ಣು ತುಂಬಿಸಿ ರಸ್ತೆ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ.

ಗ್ರಾಮಸ್ಥರು ಊರ ಪರವೂರ ಭಕ್ತರ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಟ್ಟ ಕ್ಷೇತ್ರದ ಆಡಳಿತ ಸಮಿತಿ ಮುಖ್ಯಸ್ಥರಿಗೆ ಹಾಗೂ ರಸ್ತೆ ಸಂಪರ್ಕ ಸಂಪೂರ್ಣವಾಗಿ ಕಡಿತವಾಗಿದ್ದಾಗ ಮರದ ಸೇತುವೆ ಗ್ರಾಮಸ್ಥರು ನಿರ್ಮಿಸಿದರು.

Exit mobile version